ದುಬಾೖ: ಮುಂಬರುವ ಐಸಿಸಿ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ಲೀಗ್ ಹಂತದ ಪಂದ್ಯಗಳಿಗೆ ಪಂದ್ಯ ಅಧಿಕಾರಿಗಳನ್ನು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ. ಲೀಗ್ ಹಂತದಲ್ಲಿ 23 ಪಂದ್ಯಗಳು ನಡೆಯಲಿದ್ದು ಮೂವರು ಮ್ಯಾಚ್ ರೆಫರಿ ಮತ್ತು 12 ಅಂಪಾಯರ್‌ಗಳು ಕರ್ತವ್ಯ ನಿರ್ವ ಹಿಸಲಿದ್ದಾರೆ.
ಪಂದ್ಯ ಅಧಿಕಾರಿಗಳ ಪಟ್ಟಿಯಲ್ಲಿ ಆರು ಮಹಿಳೆಯರು ಇರುವುದು ದಾಖಲೆ. ಭಾರತದ ಜಿಎಸ್ ಲಕ್ಷ್ಮೀ ಅವರು ಐಸಿಸಿ ಕೂಟದಲ್ಲಿ ಮ್ಯಾಚ್ ರೆಫರಿಯಾಗಿ ಕರ್ತವ್ಯ ನಿಭಾಯಿ ಸಲಿರುವ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗ ಲಿದ್ದಾರೆ. ಲಾರೆನ್ ಆಗೆನ್‌ಬಾಗ್, ಕಿಮ್ ಕಾಟನ್, ಕ್ಲೇರ್ ಪೊಲೊಸಾಕ್, ಸುÂ ರೆಡ್‌ಫೆರ್ನ್ ಮತ್ತು ಜಾಕ್ವೆಲಿನ್ ವಿಲಿಯಮ್ಸ್ ಮಹಿಳಾ ಅಂಪಾಯರ್‌ಗಳಾಗಿದ್ದಾರೆ.
ವಿಲಿಯಮ್ಸ್ ಅವರು ಶಾನ್ ಜಾರ್ಜ್ ಋತೆ ಫೆ. 21ರಂದು ನಡೆಯುವ ಭಾರತ ಮತ್ತು ಆಸ್ಟ್ರೇಲಿಯ ನಡುವೆ ಕೂಟದ ಆರಂಭಿಕ ಪಂದ್ಯದಲ್ಲಿ ಅಂಪಾಯರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಳೆದ ವರ್ಷ ಪುರುಷರ ಏಕದಿನ ಪಂದ್ಯದಲ್ಲಿ ಅಂಪಾಯರ್ ಆಗಿ ಕರ್ತವ್ಯ ನಿಭಾಯಿಸಿದ ಮೊದಲ ವನಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪೊಲೊಸಾಕ್ ಅವರು ಫೆ. 22ರಂದು ನಡೆಯುವ ವೆಸ್ಟ್‌ಇಂಡೀಸ್ ಮತ್ತು ಥಾçಲಂಡ್ ನಡುವಣ ಪಂದ್ಯದಲ್ಲಿ ನಿತಿನ್ ಮೆನನ್ ಜತೆ ಅಂಪಾಯರ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಐಸಿಸಿ ಎಲೈಟ್ ಪಾನೆಲ್ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಈ ಕೂಟದ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ. ಸ್ಟೀವ್ ಬೆರ್ನಾರ್ಡ್ ಕೂಡ ಮ್ಯಾಚ್ ರೆಫರಿಯಾಗಿರುತ್ತಾರೆ. ಗ್ರೆಗರಿ ಬ್ರಾತ್‌ವೇಟ್, ಕ್ರಿಸ್ ಬ್ರೌನ್, ಆಶನ್ ರಾಜಾ. ಲಾಗ್ಟನ್ ರುಸೆರೆ ಮತ್ತು ಅಲೆಕ್ಸ್ ವಾಫ್ì ಅಂಪಾಯರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಲೀಗ್ ಹಂತದ ಅಂತ್ಯದಲ್ಲಿ ಸೆಮಿಫೈನಲ್ಸ್‌ಗೆ ಅಂಪಾಯರ್‌ಗಳ ನೇಮಕ ಮಾಡಲಾಗುತ್ತದೆ. ಸೆಮಿ ಫೈನಲ್ಸ್ ಮುಗಿದ ಬಳಿಕ ಫೈನಲ್ ಪಂದ್ಯದ ಅಂಪಾಯರ್‌ಗಳನ್ನು ಅಂತಿಮಗೊಳಿಸಲಾಗುತ್ತದೆ.