Advertisement

ತ್ರಿರಾಷ್ಟ್ರ ವನಿತಾ ಹಾಕಿ: ಭಾರತಕ್ಕೆ ಗೆಲುವು

10:10 AM Dec 09, 2019 | Team Udayavani |

ಕ್ಯಾನ್‌ಬೆರಾ: ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ತ್ರಿರಾಷ್ಟ್ರ ವನಿತಾ ಹಾಕಿ ಕೂಟದ ಮೂರನೇ ಪಂದ್ಯದಲ್ಲಿ ಕಿವೀಸ್‌ ತಂಡವನ್ನು 4-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ.

Advertisement

ಶರ್ಮಿಳಾ ದೇವಿ ಅವಳಿ ಗೋಲು ಬಾರಿಸಿದರೆ ಬ್ಯುಟಿ ದುಂಗ್‌ದುಂಗ್‌, ಲಾಲ್ರಿಂಡಿಕಿ ತಲಾ ಒಂದು ಗೋಲು ಬಾರಿಸಿದರು. ನ್ಯೂಜಿಲ್ಯಾಂಡಿನ ಏಕೈಕ ಗೋಲನ್ನು ಒಲಿವಿಯಾ ಶಾನನ್‌ ಪಂದ್ಯದ ನಾಲ್ಕನೇ ನಿಮಿಷದಲ್ಲಿ ಹೊಡೆದಿದ್ದರು.

ಭಾರತವು ರವಿವಾರ ತನ್ನ ನಾಲ್ಕನೇ ಮತ್ತು ಕೊನೆಯ ಪಂದ್ಯವನ್ನು ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಭಾರತವು ಕಿವೀಸ್‌ ವಿರುದ್ಧ ಎರಡು ಬಾರಿ ಮತ್ತು ಆಸ್ಟ್ರೇಲಿಯ ವಿರುದ್ಧ ಒಮ್ಮೆ ಮುಖಾಮುಖೀಯಾಗಿದ್ದು ಎರಡರಲ್ಲಿ ಜಯ ದಾಖಲಿಸಿದೆ.

ಭಾರತದ ಆರಂಭ ಉತ್ತಮ ವಾಗಿರಲಿಲ್ಲ. ನಾಲ್ಕನೇ ನಿಮಿಷದಲ್ಲಿ ನ್ಯೂಜಿಲ್ಯಾಂಡಿಗೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಒಲಿವಿಯಾ ಸುಲಭವಾಗಿ ಗೋಲನ್ನು ಹೊಡೆದು ಕಿವೀಸ್‌ಗೆ ಮುನ್ನಡೆ ಒದಗಿಸಿದರು. ಆದರೆ ಆಬಳಿಕ ಭಾರತ ತೀವ್ರ ಹೋರಾಟ ನಡೆಸಿತು. 12ನೇ ನಿಮಿಷದಲ್ಲಿ ಶರ್ಮಿಳಾ ಗೋಲನ್ನು ಹೊಡೆದು ಸಮಬಲಗೊಳಿಸಿದರು. ದ್ವಿತೀಯ ಕ್ವಾರ್ಟರ್‌ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಹೊಡೆಯುವ ಹಲವು ಅವಕಾಶ ಲಭಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೂ 27ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ದುಂಗ್‌ದುಂಗ್‌ ಗೋಲನ್ನು ಹೊಡೆಯುವ ಮೂಲಕ ಭಾರತ 2-1 ಮುನ್ನಡೆ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next