Advertisement

ದೇವದಾಸಿ ಪದ್ಧತಿ ಹೆಸರಲ್ಲಿ ಮಹಿಳೆ ಶೋಷಣೆ

05:23 PM Mar 13, 2018 | |

ಕೊಟ್ಟೂರು: ಧಾರ್ಮಿಕವಾಗಿ ಮಹಿಳೆಯರನ್ನು ದೇವದಾಸಿ ಪದ್ಧತಿ ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿದೆ ಎಂದು ಭಾರತೀಯ 
ಜನಶಕ್ತಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಹೇಳಿದರು.

Advertisement

ಇಲ್ಲಿನ ಎಪಿಎಂಸಿ ಅವರಣದಲ್ಲಿ ಜ್ಯೂನಿಯರ್‌ ಚೇಂಬರ್‌ ಆಪ್‌ ಇಂಟರ್‌ನ್ಯಾಷನಲ್‌ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ
ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ 
ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರನ್ನು ಧಾರ್ಮಿಕ ಹೆಸರಿನಲ್ಲಿ ದೇವದಾಸಿ ಪದ್ದತಿ ಹಾಗೂ ಸತಿಸಹಗಮನ ಪದ್ಧತಿಯಿಂದ ಶೋಷಣೆಗೆ ಒಳಪಡಿಸಲಾಗುತ್ತಿದೆ. ದೇವದಾಸಿ ಪದ್ಧತಿ ಕದ್ದು ಮುಚ್ಚಿ ನಡೆಯುತ್ತಿವೆ ಎಂದು ಮಹಿಳೆಯರಿಗಾಗುವ ನೋವನ್ನು ಹಂಚಿಕೊಂಡರು. ಮಹಿಳೆಯರು ಆರ್ಥಿಕವಾಗಿ, ಶಿಕ್ಷಣವಾಗಿ ಎಲ್ಲ ರಂಗದಲ್ಲೂ ಸಬಲೆಯಾದಾಗ ಅಭಿವೃದ್ಧಿ ಸಾಧ್ಯ.
 ಮಕ್ಕಳಿಗೆ ಉತ್ತಮ ಸಂಸ್ಕಾರ ಕಲ್ಪಿಸುವುದು, ಕುಟುಂಬ ನಿರ್ವಹಣೆಯನ್ನು ಮಹಿಳೆ ಸಮರ್ಥವಾಗಿ ನಿಭಾಯಿಸುತ್ತಾಳೆ. ಸಮಾಜದಲ್ಲಿ
ಮಹಿಳೆಯ ಪಾತ್ರ ಮಹತ್ವವಾದ್ದದು. ಮಹಿಳೆಯರ ಮೇಲಿನ ಶೋಷಣೆ ನಿಲ್ಲಬೇಕಿದೆ ಎಂದರು.

ಜ್ಯೂನಿಯರ್‌ ಚೇಂಬರ್‌ ಆಪ್‌ ಇಂಟರ್‌ನ್ಯಾಷನಲ್‌ ವಲಯ ನಿರ್ದೆಶಕ ಪಂಪಾಪತಿ ಅಂಗಡಿ, ಧರ್ಮಸ್ಥಳ ಸಂಸ್ಥೆಯ ವಲಯ ಮೇಲ್ವಿಚಾರಕ ರಾಮಚಂದ್ರ ಮಾತನಾಡಿದರು. ಕೂಡ್ಲಿಗಿ ತಾಪಂ ಅಧ್ಯಕ್ಷ ಬಿ.ವೆಂಕಟೇಶ್‌ ನಾಯ್ಕ, ಜ್ಯೂನಿಯರ್‌ ಇಂಟರ್‌ ನ್ಯಾಶನಲ್‌ ಮಹಿಳಾ ವಿಬಾಗದ ಅಧ್ಯಕ್ಷೆ ವಿದ್ಯಾಶ್ರೀ, ಘಟಕದ ಅಧ್ಯಕ್ಷೆ ಎಸ್‌.ಎಂ. ನಳಿನಿ, ಹಡಗಲಿ ಶಾಖೆಯ ಅಧ್ಯಕ್ಷೆ ಹೇಮಾಕಿರಣ್‌ ಜೈನ್‌, ಕಾರ್ಯದರ್ಶಿ ಗುರುಬಸವರಾಜ, ಮಕ್ಕಳ ವಿಭಾಗದ ಅಧ್ಯಕ್ಷೆ ಮೇಘನಾ ಬಿ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next