ಪುಣೆ:ಅರಸಿನ ಕುಂಕುಮ ಕಾರ್ಯಕ್ರಮವು ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ಮಹಿಳೆಯರು ಆಚರಿಸುತ್ತಾ ಬಂದಿರುವ ಸಂಪ್ರದಾಯವಾಗಿದೆ.ಈ ಸಂಸ್ಕೃತಿಯನ್ನು ಪುಣೆಯಲ್ಲಿರುವ ನಮ್ಮ ತುಳುನಾಡ ಮಹಿಳೆಯರು ಒಗ್ಗಟ್ಟಿನಿಂದ ಆಚರಿಸುತ್ತಿರುವುದು ಅಭಿನಂದನೀಯವಾಗಿದೆ. ನಮ್ಮ ಜೀವನದಲ್ಲಿ ಅರಸಿನ ಕುಂಕುಮವು ವೈಜ್ಞಾನಿಕ ದೃಷ್ಟಿಕೋನದಿಂದಲೂ ಧಾರ್ಮಿಕ ಆಚರಣೆಯಲ್ಲಿಯೂ ಬಹಳ ಮಹತ್ವವನ್ನು ಹೊಂದಿದೆ ಆದುದರಿಂದ ಈ ಸಂಸ್ಕೃತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಫೆ. 3ರಂದು ಡಾ. ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಪುಣೆ ತುಳುಕೂಟದ ಮಹಿಳಾ ವಿಭಾಗ ಹಮ್ಮಿಕೊಂಡ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಮಿತಿಯ ಸಮ್ಮಾನ ಸ್ವೀಕರಿಸಿ ಮಾತನಾಡುತ್ತಾ ಆರೋಗ್ಯ ಮತ್ತು ಶುದ್ಧತೆಯ ಪ್ರತೀಕವಾಗಿರುವ ಅರಿಸಿನದಲ್ಲಿ ರೋಗನಿರೋಧಕ ಶಕ್ತಿಯಿದೆ. ಸೌಂದರ್ಯವರ್ಧಕವಾಗಿಯೂ ನಾವು ಅರಸಿನವನ್ನು ಉಪಯೋಗಿಸುತ್ತೇವೆ. ಅಂತೆಯೇ ಭೂಮಿಯ ಸಕಲ ಜೀವಸಂಕುಲಗಳಿಗೆ ಚೈತನ್ಯ ನೀಡುವ ಬಣ್ಣ ಕೆಂಪು ಅಥವಾ ಕುಂಕುಮ ಬಣ್ಣ. ದೇವರ ಪೂಜೆಗೆ ಉಪಯೋಗಿಸುವ ಕುಂಕುಮ, ಹಣೆಯಲ್ಲಿಡುವ ಕುಂಕುಮಕ್ಕೆ ಪಂಚೇಂದ್ರಿಯಗಳನ್ನು ಸಮತೋಲನದಲ್ಲಿಡುವ ಶಕ್ತಿಯಿದೆ. ನಮ್ಮ ಸಂಸ್ಕೃತಿಯಲ್ಲಿ ಅರಸಿನ ಕುಂಕುಮ ಧಾರ್ಮಿಕವಾಗಿಯೂ ಬಹಳ ಪವಿತ್ರವಾಗಿ ಗುರುತಿಸಿಕೊಂಡಿದೆ.
ನಾಗಾರಾಧನೆ, ದೇವತಾರಾಧನೆ, ಮಂಗಲ ಕಾರ್ಯಗಳಲ್ಲಿ, ಶೃಂಗಾರದ ಸಂಕೇತವಾಗಿ, ಸನಾತನ ಹಿಂದುತ್ವದ ಸಂಕೇತವಾಗಿ ಅರಸಿನ ಕುಂಕುಮದ ಮಹತ್ವವನ್ನು ನಾವು ಮನಗಾಣಬಹುದಾಗಿದೆ. ಒಟ್ಟಿನಲ್ಲಿ ನಾವೆಲ್ಲರೂ ಈ ಪವಿತ್ರವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ ಈ ಕಾರ್ಯಕ್ರಮದಲ್ಲಿ ಒಗ್ಗಟ್ಟಿನಿಂದ ಸಂಭ್ರಮಿಸುವ ಅವಕಾಶವನ್ನು ಕಲ್ಪಿಸಿರುವುದಕ್ಕೆ ವಂದನೆಗಳು. ಪುಣೆ ತುಳುಕೂಟದ ಮಹಿಳಾ ವಿಭಾಗದ ಈ ಪ್ರೀತಿಯ ಸಮ್ಮಾನಕ್ಕೆ ಸಮಿತಿಯ ಕಾರ್ಯಾಧ್ಯಕ್ಷೆ ಹಾಗೂ ಪದಾಧಿಕಾರಿಗಳೆಲ್ಲರಿಗೂ ಕೃತಜ್ಞತೆಗಳು ಎಂದರು.
ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಉಮಾವತಿ ಎಸ್. ಶೆಟ್ಟಿ ಹಾಗೂ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ ಗೀತಾ ಡಿ. ಪೂಜಾರಿ ಅರಸಿನ ಕುಂಕುಮದ ಮಹತ್ವದ ಬಗ್ಗೆ ತಿಳಿಸಿದರು. ಸಮಿತಿಯ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ ಶುಭ ಹಾರೈಸಿದರು. ಸಮಿತಿ ವತಿಯಿಂದ ಮಹಿಳಾ ಸದಸ್ಯರು ಸಂಧ್ಯಾ ವಿ. ಶೆಟ್ಟಿಯವರಿಗೆ ಶಾಲು ಹೊದೆಸಿ ಸ್ಮರಣಿಕೆ, ಪುಷ್ಪಗುತ್ಛ ನೀಡಿ ಸಮ್ಮಾನಿಸಿದರು.
ಸಮಿತಿ ಕೋಶಾಧಿಕಾರಿ ಪ್ರಿಯಾ ಎಚ್. ದೇವಾಡಿಗ ತುಳುಭಾಷೆಯ ಬಗೆಗಿನ ಅಭಿರುಚಿಯ ಬಗ್ಗೆ ಸ್ಪರ್ಧೆಯನ್ನು ನಡೆಸಿ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುಣೆ ಮಹಾನಗರಪಾಲಿಕೆಯ ನಗರಸೇವಕಿ ಸುಜಾತಾ ಎಸ್ ಶೆಟ್ಟಿ, ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ,ಬಂಟ್ಸ… ಅಸೋಸಿಯೇಶನ್ ಪುಣೆ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ. ರೈ ,ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ಉಮಾ ಪೂಜಾರಿ, ಪಿಂಪ್ರಿ ಬಿಲ್ಲವ ಸಂಘದ ಮಹಿಳಾ ವಿಭಾಗದ ಕುಸುಮಾ ಸಾಲ್ಯಾನ್ ,ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್ ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ ಶೆಟ್ಟಿ , ಶ್ರೀ ಗುರುದೇವಾ ಸೇವಾ ಬಳಗದ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯಾಧ್ಯಕ್ಷೆ ಪ್ರೇಮಾ ಶೆಟ್ಟಿ, ಕುಲಾಲ ಸಂಘದ ಮಹಿಳಾ ವಿಭಾಗದ ಸರಸ್ವತಿ ಕುಲಾಲ್ ಇವರನ್ನು ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಈ ಸಂದರ್ಭ ಹಿರಿಯರಾದ ಗಿರಿಜಾ ಸುಂದರ್ ಶೆಟ್ಟಿಯವರನ್ನು ಗೌರವಿಸಲಾಯಿತು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಈ ಸಂದರ್ಭ ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಮಹಿಳೆಯರಿಗೆ ಸಮಿತಿ ಸದಸ್ಯೆಯರು ಅರಸಿನ ಕುಂಕುಮ ಹಚ್ಚಿ ನೆನಪಿನ ಕಾಣಿಕೆಗಳನ್ನು ನೀಡಿ ಶುಭವನ್ನು ಹಾರೈಸಿದರು.ಗೌರವ ಕಾರ್ಯಾಧ್ಯಕ್ಷೆ ನಯನಾ ಸಿ. ಶೆಟ್ಟಿ, ಪ್ರಿಯಾ ಎಚ್. ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸರಿತಾ ಟಿ. ಶೆಟ್ಟಿ ಸಂಘ ಸಂಸ್ಥೆಗಳ ಕಾರ್ಯಾಧ್ಯಕ್ಷೆಯರ ಸತ್ಕಾರದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯದರ್ಶಿ ಶಶಿಕಲಾ ಎ. ಶೆಟ್ಟಿ ವಂದಿಸಿದರು. ಶಂಕರ್ ಪೂಜಾರಿ ಬಂಟಕಲ್ಲು, ಸಚಿನ್ ಶೆಟ್ಟಿ ಎಣ್ಣೆಹೊಳೆ ಹಾಗೂ ಅಮಿತಾ ಸಂಪತ್ ಪೂಜಾರಿ ಅವರಿಂದ ಗಾನಸುಧೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ದಿವಾಕರ ಶೆಟ್ಟಿ ಮಾಣಿಬೆಟ್ಟು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕÇÉಾಡಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಗೌರವ ಕಾರ್ಯಧ್ಯಕ್ಷೆ ನಯನಾ ಸಿ. ಶೆಟ್ಟಿ , ಕಾರ್ಯಧ್ಯಕ್ಷೆ ಸುಜಾತಾ
ಡಿ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಉಮಾ ಎಸ್. ಶೆಟ್ಟಿ , ಕಾರ್ಯದರ್ಶಿ ಶಶಿಕಲಾ ಎ. ಶೆಟ್ಟಿ, ಕೋಶಾಧಿಕಾರಿ ಪ್ರಿಯಾ ಎಚ್. ದೇವಾಡಿಗ, ಜತೆ ಕಾರ್ಯದರ್ಶಿ ರಮಾ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ರಂಜಿತಾ ಆರ್. ಶೆಟ್ಟಿ , ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷೆ ಸರಿತಾ ಟಿ. ಶೆಟ್ಟಿ, ಸಾಂಸ್ಕೃತಿಕ ಸಮಿತಿ ಉಪಕಾರ್ಯಧ್ಯಕ್ಷೆ ಸರಿತಾ ವೈ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷೆ ಗೀತಾ ಡಿ. ಪೂಜಾರಿ, ಕ್ರೀಡಾ ಸಮಿತಿ ಉಪಕಾರ್ಯಧ್ಯಕ್ಷೆ ನವಿತಾ ಎಸ್. ಪೂಜಾರಿ, ಜನಸಂಪರ್ಕಾಧಿಕಾರಿ ಸರಸ್ವತಿ ಸಿ. ಕುಲಾಲ್ ಮತ್ತು ಆಶಾ ಆರ್. ಪೂಜಾರಿ, ಸಮಿತಿ ಸದಸ್ಯರಾದ ಶಕುಂತಳಾ ಆರ್. ಶೆಟ್ಟಿ ,ಸರೋಜಾ ವಿ. ಶೆಟ್ಟಿ, ಮಮತಾ ಎಸ್. ಶೆಟ್ಟಿ, ಕವಿತಾ ಎನ್. ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು