Advertisement

ಮಹಿಳಾ ದಿನಾಚರಣೆ ವಿಶೇಷ: ಮಕ್ಕಳ ಕಲಾ ಪ್ರೇರಕಿ ಕಲ್ಪನಾ

02:03 PM Mar 08, 2022 | Team Udayavani |

ವಿಜಯಪುರ: ಮಕ್ಕಳಿಗಾಗಿ ತಾಯಿ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ರೇಖಾಚಿತ್ರ ಕಲಾವಿದೆ ಕಲ್ಪನಾ ಬಾಬಕರ ಜೀವಂತ ಸಾಕ್ಷಿ. ಬಾಲ್ಯದಲ್ಲಿ ತಮ್ಮ ಮಕ್ಕಳಲ್ಲಿದ್ದ ಚಿತ್ರಕಲೆ ಆಸಕ್ತಿಗೆ ಮಾರ್ಗದರ್ಶನ ಮಾಡಲು ಈ ತಾಯಿ ಚಿತ್ರಕಲೆಯಲ್ಲಿ ಪದವಿಯನ್ನೇ ಪಡೆದು, ಇದೀಗ ಚಿತ್ರಕಲಾವಿದೆಯಾಗಿ ಹೊರ ಹೊಮ್ಮಿದ್ದಾರೆ.

Advertisement

ಸದ್ಯ ಬಿಎಸ್‍ಸಿ ನರ್ಸಿಂಗ್ ಓದುತ್ತಿರುವ ಮಗ ಶ್ರವಣ ಹಾಗೂ ಬಿಇ ಓದುತ್ತಿರುವ ಮಗಳು ಅಮೃತಾ ಇವರು ಶಾಲೆ ದಿನಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದನ್ನು ಕಲ್ಪನಾ ಗಮನಿಸಿದ್ದರು. ಇದಕ್ಕಾಗಿ ಚಿತ್ರಕಲೆಯ ಶಿಕ್ಷಕರ ಹುಡುಕಾಟದಲ್ಲಿದ್ದ ಅವರಿಗೆ ವಿಜಯಪುರದಲ್ಲಿ ಚಿತ್ರಕಲಾ ಕಾಲೇಜು ಇರುವಿಗೆ ಬಂತು.

ಹೊಲಿಗೆ, ಹೆಣಿಕೆಯಲ್ಲಿ ವಿಶೇಷ ಜ್ಞಾನ ಹೊಂದಿದ್ದ ಕಲ್ಪನಾ ಅವರು ತಮ್ಮ ಮಕ್ಕಳಿಗೆ ಚಿತ್ರಕಲೆ ಶಿಕ್ಷಣ ನೀಡಲು ಸ್ವಯಂ ತಾವೇ ಚಿತ್ರಕಲಾ ಡಿಪ್ಲೋಮಾ ಶಿಕ್ಷಣ ಪಡೆದರು. ಇದೀಗ ಸಂಗನಬಸವ ಶಿಸುನಿಕೇತನ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲಿಸುತ್ತಿದ್ದಾರೆ.ಕಳೆದ ಒಂದು ದಶಕದಿಂದ ಸುಮಾರು ನೂರಾರು ಮಕ್ಕಳಿಗೆ ಚಿತ್ರಕಲೆಯ ಪಾಠ ಮಾಡುತ್ತಿದ್ದು, ಪ್ರತಿ ವರ್ಷ ಚಿತ್ರಕಲಾ ಶಿಬಿರಗಳನ್ನೂ ಏರ್ಪಡಿಸುತ್ತಾರೆ.

ಮನಸ್ಸಿನ ಭಾವನಬೆಗಳನ್ನು ಹೊರ ಹೊಮ್ಮಿಸುವಲ್ಲಿ ಚಿತ್ರಕಲೆ ಅದ್ಭುತ ಸಾಧನವೂ ಹೌದು, ವೇದಿಕೆಯೂ ಹೌದು ಎನ್ನುವ ಕಲ್ಪನಾ ಅವರು ಈಗಾಗಲೇ 8 ಕ್ಕೂ ಹೆಚ್ಚು ಕಡೆಗಳಲ್ಲಿ ತಮ್ಮ ಚಿತ್ರಕಲಾ ಕೃತಿಗಳ ಪ್ರದರ್ಶನ ಮಾಡಿದ್ದಾರೆ.

Advertisement

ರಚನಾತ್ಮಕ ಹಾಗೂ ರೇಖಾಚಿತ್ರಗಳನ್ನು ಬಿಡಿಸುವಲ್ಲಿ ಕಲ್ಪನಾ ಅವರು ಸಿದ್ಧಹಸ್ತರೆಂದೇ ಕರೆಸಿಕೊಂಡಿದ್ದು, ಚಿತ್ರಕಲೆಯಲ್ಲಿ ಜಿಲ್ಲೆಯ ಕೀರ್ತಿ ಬೆಳಗುವ ಭರವಸೆ ಮೂಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next