Advertisement

ವಿದ್ಯೆ ಇದ್ದರೆ ಮಹಿಳೆ ಮತ್ತಷ್ಟು ಪ್ರಬುದ್ಧ: ಪೂಜಾ

12:07 PM Mar 15, 2021 | Team Udayavani |

ವಿಜಯಪುರ: ವಿದ್ಯಾಭ್ಯಾಸ ಇಲ್ಲದ ಹೆಣ್ಣು ಮಕ್ಕಳು ಸಹ ತನ್ನ ಜಾಣ್ಮೆಯಿಂದ ಸಂಸಾರ ನಿಭಾಯಿಸಬಲ್ಲಳು. ಸಮಸ್ಯೆಗಳನ್ನು ಎದುರಿಸಬಲ್ಲಳು. ಆದರೆ ಹೆಣ್ಣಿಗೆ ವಿದ್ಯೆ ಸಿಕ್ಕರೆ ಅವಳು ಮತ್ತಷ್ಟು ಪ್ರಬುದ್ಧಳಾ ಗುತ್ತಾಳೆ ಎಂದು ಗಾಯಕಿ, ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ ಪೂಜಾ ಭಾರಿತ್ತಾಯ ಹೇಳಿದರು.

Advertisement

ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಇನ್ನರ್‌ವ್ಹೀಲ್‌ ಕ್ಲಬ್‌ ಆಫ್ ವಿಜಯಪುರದ ವತಿಯಿಂದ ಏರ್ಪಡಿಸಿದ್ದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭೇದಭಾವ ಮಾಡದೇ ಬೆಳೆಸಿ: ಅಡುಗೆ ಮಾಡುವುದು ಕೇವಲ ಹೆಣ್ಣಿನ ಕೆಲಸವಲ್ಲ, ವಾಹನ ಚಾಲನೆ ಗಂಡು ಮಕ್ಕಳ ಹಕ್ಕಲ್ಲ. ಪೋಷಕರು ಮನೆಯಲ್ಲಿ ಮಕ್ಕಳಿಗೆ ಹೆಣ್ಣು ಗಂಡು ಮಕ್ಕಳೆಂಬ ಭೇದ ಭಾವ ಮಾಡದೆ ಬೆಳೆಸಬೇಕು ಎಂದು ತಿಳಿಸಿದರು.

ಪರಿಗಣಿಸುವುದು ಮುಖ್ಯ: ಇನ್ನರ್‌ವೀಲ್‌ ಅಧ್ಯಕ್ಷೆ ಗಾಯತ್ರಿ ಮಂಜುನಾಥ್‌ ಮಾತನಾಡಿ, ಹೆಣ್ಣಿನ ಹಕ್ಕು, ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ಗೌರವಿಸು ವುದುಮುಖ್ಯ. ಹೆಣ್ಣಿನ ಜೀವನ ಮೌಲ್ಯವನ್ನು ಪರಿಗಣಿಸುವುದು ಬಹಳ ಮುಖ್ಯ. ಮಹಿಳೆಯರನ್ನು ಸಬಲೆಯ ನ್ನಾಗಿ ಮಾಡುವುದು ಇದರ ಉದ್ದೇಶ. ಪುರುಷರೂ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಚಿತ್ರಗೀತೆ ಸ್ಪರ್ಧೆ: ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಗೃಹಿಣಿಯರಿಗೆ ಕನ್ನಡ ಚಲನಚಿತ್ರ ಗೀತೆಯ ನೃತ್ಯ ಸ್ಪರ್ಧೆ ಏರ್ಪಡಿಸಿದ್ದು, ತಾಯಿ ಹಾಗೂ ಮಗಳು/ಮಗ ನೃತ್ಯದಲ್ಲಿ ಭಾಗವಹಿಸಲು ಅವಕಾಶವಿತ್ತು. ನೃತ್ಯದಲ್ಲಿ 5 ವರ್ಷದಿಂದ10 ವರ್ಷದ ಮಕ್ಕಳ ವಿಭಾಗದಲ್ಲಿ ಅಕ್ಷತಾ ಲಿಂಗರಾಜು ಮತ್ತು ಮಗಳು ಪ್ರಜ್ಞಾ ಜೋಡಿಗೆ ಪ್ರಥಮಬಹುಮಾನ, ಅಂಬಿಕಾ ಮಂಜುನಾಥ್‌ ಮತ್ತುಅವರ ಮಗನ ಜೋಡಿಗೆ ದ್ವಿತೀಯ ಬಹುಮಾನ ಸಿಕ್ಕರೆ, 11 ರಿಂದ 15 ವರ್ಷದ ಮಕ್ಕಳ ವಿಭಾಗದಲ್ಲಿರೂಪಾರಾಜ್‌ ಮತ್ತು ಮಗಳು ಮೌಲ್ಯಾ ಜೋಡಿ ಪ್ರಥಮ ಬಹುಮಾನ ಗಳಿಸಿದರು.

Advertisement

ಮಿಮಿಕ್ರಿ, ನೃತ್ಯ, ಇತರೆ ಮನರಂಜನಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿಅಂಧ ಶಾಲೆಯ ಮಕ್ಕಳಿಗೆ ಬ್ರೈಲ್‌ ಲಿಪಿ ಬರೆಯುವ ಬ್ರೈಲ್‌ ಪೇಪರ್‌ ನೀಡಿದರು.

ಇನ್ನರ್‌ವೀಲ್‌ ಸಂಘದಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ ಪೂಜಾ ಭಾರಿತ್ತಾಯ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಇನ್ನರ್‌ವೀಲ್‌ ಕಾರ್ಯದರ್ಶಿ ಚಂದ್ರಕಲಾ ರುದ್ರಮೂರ್ತಿ, ಸಂಘದ ಇತರೆ ಸದಸ್ಯರು ಉಪಸ್ಥಿತರಿದ್ದರು.

ಇಂದು ಸ್ತ್ರೀ ವಾದ ಎನ್ನುವುದು ಸರಿಯಾದ ಅರ್ಥದಲ್ಲಿ, ಸರಿಯಾದಕಾರಣಕ್ಕೆ ಬಳಕೆಯಾಗದೆ ಸಣ್ಣಪುಟ್ಟ ವಾದವಿವಾದಗಳನ್ನು ಸೃಷ್ಟಿಸುತ್ತದೆ. ಆದರೆಸ್ತ್ರೀವಾದ, ಮಹಿಳಾ ಸಬಲೀಕರಣ ಉತ್ತಮ ಕಾರಣಕ್ಕೆ ಬಳಕೆಯಾಗಬೇಕು.- ಪೂಜಾ ಭಾರಿತ್ತಾಯ, ಗಾಯಕಿ, ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ

Advertisement

Udayavani is now on Telegram. Click here to join our channel and stay updated with the latest news.

Next