Advertisement

ಮಹಿಳೆಯಿಂದಲೇ ಕುಟುಂಬಗಳು ನೆಮ್ಮದಿ ಬದುಕು ಕಾಣಲು ಸಾಧ್ಯ: ಆಶಾಬೇಗಂ

05:32 PM Mar 08, 2022 | Team Udayavani |

ಗಂಗಾವತಿ: ಮಹಿಳೆ ತಾಯಿಯಾಗಿ ತಂಗಿಯಾಗಿ ಪತ್ನಿಯಾಗಿ ಶಿಕ್ಷಕಿಯಾಗಿ ಪುರುಷನ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವುದರಿಂದ ಇಡೀ ಕುಟುಂಬ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಹೇಳಿದರು.

Advertisement

ಅವರು ಮಂಗಳವಾರ ನಗರದ ಶ್ರೀಕೃಷ್ಣದೇವರಾಯ ಕಲಾ ಭವನದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಾವಲಂಭಿ ಮಹಿಳಾ ಸಮಾಜ ನಿರ್ಮಾಣವಾಗಲು ಪುರುಷ ಸಮಾಜ ಸಂಪೂರ್ಣ ಸಹಕಾರ ನೀಡಬೇಕು. ಮಹಿಳಾ ಶಿಕ್ಷಣ ಸ್ವಾವಲಂಭಿ ಜೀವನಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು. ಲಿಂಗ ತಾರತಮ್ಯ ಮಾಡುವ ಮೂಲಕ ಶತಮಾನಗಳಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಮಹಿಳೆ ಸಾಧನೆ ಮಾಡದೇ ಇರುವ ಕ್ಷೇತ್ರಗಳಿಲ್ಲ. ಅವಕಾಶ ಕಲ್ಪಿಸಿದರೆ ಪುರುಷರಿಗಿಂತ ಮಹಿಳೆ ಹೆಚ್ಚಿನ ಸಾಧನೆ ಮಾಡುತ್ತಾರೆ. ಆದ್ದರಿಂದ ಮಗನಿಗೆ  ಕಲ್ಪಿಸುವ ಅವಕಾಶವನ್ನು ಮಗಳಿಗೂ ಕೊಡುವಂತಾಗಬೇಕೆಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರೇಣುಕಾ, ಕಾಶಿಂಬೀ, ಆಶಾಕಾರ್ಯಕರ್ತೆಯರ ಸಂಘದ ವಿಜಯಲಕ್ಷ್ಮೀ , ಲಾಲಬೀ, ದೀಪಾ, ಆಪ್ರೀನ್, ಕೆ.ಲಲಿತಾ, ಗೌಸಿಯಾ, ಸುಮಾ, ಸರಸ್ವತಿ, ಶರಣಮ್ಮ, ರಿಯಾನ್, ಮೀನಾಕ್ಷಿ ಸರೋಜಾಬಾಯಿ, ಜ್ಯೋತಿ, ಲಕ್ಷ್ಮೀ ಸೇರಿ ನೂರಾರು ಆಶಾಕಾರ್ಯಕರ್ತೆಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next