Advertisement

ಮಹಿಳಾ ಕ್ರಿಕೆಟ್‌: ಉಜಿರೆಯ ಎಸ್‌ಡಿಎಂಗೆ ಪ್ರಶಸ್ತಿ

11:42 AM Mar 03, 2017 | Harsha Rao |

ಬೆಳ್ತಂಗಡಿ: ಉಜಿರೆ ಶ್ರೀ ರತ್ನ ವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಗುರುವಾರ ಸಮಾರೋಪಗೊಂಡ ಮಂಗಳೂರು ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಅಂತರ್‌ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾಟದಲ್ಲಿ ಆತಿಥೇಯ ಉಜಿರೆಯ ಎಸ್‌ಡಿಎಂ ಕಾಲೇಜ್‌ ಪ್ರಶಸ್ತಿ  ಜಯಿಸಿದೆ. ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜು ರನ್ನರ್‌ ಅಪ್‌ ಪ್ರಶಸ್ತಿ ಗಳಿಸಿದೆ.

Advertisement

ಮಂಗಳೂರು ವಿವಿ ಕ್ಯಾಂಪಸ್‌ ತಂಡವು ತೃತೀಯ ಹಾಗೂ ಮೂಡಬಿದಿರೆ ಆಳ್ವಾಸ್‌ ಪದವಿ ಕಾಲೇಜು ತಂಡ ಚತುರ್ಥ ಬಹುಮಾನ ಪಡೆದಿದೆ. ಬೆಸ್ಟ್‌ ಬ್ಯಾಟ್ಸ್‌ವುಮನ್‌ ಪ್ರಶಸ್ತಿಯನ್ನು ಎಸ್‌ಡಿಎಂ ಉಜಿರೆಯ ಮುತ್ತಮ್ಮ, ಬೆಸ್ಟ್‌ ಬೌಲರ್‌ ಪ್ರಶಸ್ತಿಯನ್ನು ಎಸ್‌ಎಂಎಸ್‌ ಬ್ರಹ್ಮಾವರ ತಂಡದ ಸುಪ್ರಿಯಾ, ವುಮನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನು ಎಸ್‌ಡಿಎಂನ ಮಧುಶ್ರೀ ಪಡೆದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಪೂರಣ್‌ವರ್ಮ ಬಹುಮಾನ ವಿತರಿಸಿದರು. ಮಹಿಳಾ ಕ್ರಿಕೆಟ್‌ ಪಂದ್ಯದ ಪರಿವೀಕ್ಷಕ ಡಾ| ಜಾನ್‌ ಪಿಂಟೋ, ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌ನ ನಿರ್ದೇಶಕ ಬಾಲಭಾಸ್ಕರ್‌, ಎಸ್‌ಡಿಎಂ ಕಾಲೇಜು ದೈಹಿಕ ನಿರ್ದೇಶಕ ರಮೇಶ್‌, ಸಂದೇಶ್‌, ಶಾರದಾ, ತಂಡದ ಕೋಚ್‌ ಪ್ರಭಾಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next