Advertisement

ರೈಲಿನ ಮಧ್ಯೆ ಮಹಿಳಾ ಬೋಗಿ

06:00 AM May 05, 2018 | Team Udayavani |

ನವದೆಹಲಿ: ಮಹಿಳೆಯರ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ರೈಲುಗಳ ಕೊನೆಯಲ್ಲಿ ಅಳವಡಿಸಲಾಗುವ ಮಹಿಳಾ ಬೋಗಿಗಳನ್ನು ಇನ್ನು ರೈಲಿನ ಮಧ್ಯದಲ್ಲಿ ಇಡಲಾಗುತ್ತದೆ. ಬೋಗಿ ಕೊನೆಯಲ್ಲಿರುವುದರಿಂದ ಆ ಭಾಗದ ಪ್ಲಾಟ್‌ಫಾರಂ ನಿರ್ಜನವಾಗಿರುತ್ತದೆ ಹಾಗೂ ಕತ್ತಲೆಯಾಗಿರುತ್ತದೆ. ಇದರಿಂದ ಮಹಿಳೆಯರು ಈ ಬೋಗಿಯನ್ನು ಹತ್ತಲು ಹಿಂಜರಿಯುತ್ತಾರೆ ಎಂಬ ಕಾರಣದಿಂದ ರೈಲ್ವೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲ, ತಕ್ಷಣ ಗುರುತಿಸಲು ಅನುಕೂಲವಾಗಲಿ ಎಂದು ಈ ಬೋಗಿಗೆ ತಿಳಿ ಗುಲಾಬಿ ಬಣ್ಣ ಬಳಿಯಲಾಗುತ್ತದೆ.

Advertisement

ಕಿಟಕಿಗೆ ಜಾಲರಿ: ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಾಗ, ಮಹಿಳೆಯರ ಬೋಗಿಗಳಿಗೆ ಪುರುಷರು ಕಿಟಕಿಯಿಂದಲೂ ನುಗ್ಗುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಮಹಿಳಾ ಬೋಗಿಗಳಿಗೆ ಜಾಲರಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಮಹಿಳಾ ಪ್ರಯಾಣಿಕರಿಗೆ ಭದ್ರತಾ ಭಾವ ಮೂಡುತ್ತದೆ. ಇನ್ನೊಂದೆಡೆ ಒಂದು ರೈಲಿನಲ್ಲಿ ಪುರುಷರ ಜತೆಗೆ ಮಹಿಳಾ ಸಿಬ್ಬಂದಿಗೂ ಇರುವಂತೆ ನೋಡಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ ಮುಂದಿನ ಮೂರು ವರ್ಷಗಳಲ್ಲಿ ಸ್ಟೇಷನ್‌ಗಳ ನಿರ್ವಹಣೆ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಪ್ರತಿ ರೈಲು ನಿಲ್ದಾಣಗಳಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಚೇಂಜಿಂಗ್‌ ರೂಮ್‌ ಸೌಲಭ್ಯ ಒದಗಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next