Advertisement

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

12:59 AM Jun 17, 2024 | Team Udayavani |

ಹೊಸದಿಲ್ಲಿ: ಕರ್ನಾಟಕಕ್ಕೆ ಶೀಘ್ರದಲ್ಲಿಯೇ 9ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಜೂ.20ರಂದು ತಮಿಳುನಾಡು ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಮಧುರೈ-ಬೆಂಗಳೂರು ನಡುವೆ ಸಂಚರಿಸಲಿರುವ ಹೊಸ ರೈಲಿಗೆ ಹಸುರು ನಿಶಾನೆ ತೋರಿಸಲಿದ್ದಾರೆ. ಅದು ಕೇಸರಿ ಬಣ್ಣದ್ದಾಗಿರಲಿದ್ದು, ದಿಂಡಿಗಲ್‌, ಕರೂರ್‌, ಸಲೇಂ, ಧರ್ಮಾಪುರಿ, ಹೊಸೂರು ಮಾರ್ಗವಾಗಿ ಸಂಚರಿಸಲಿದೆ ಎನ್ನಲಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು-ಚೆನ್ನೈ, ಬೆಂಗಳೂರು-ಧಾರವಾಡ, ಯಶವಂತಪುರ-ಕಾಚೀಗುಡ, ಕೊಯಮತ್ತೂರು- ಬೆಂಗಳೂರು, ಮಂಗಳೂರು-ಮಡಗಾಂವ್‌, ಮಂಗಳೂರು-ತಿರುವನಂತಪುರ, ಕಲಬುರಗಿ-ಬೆಂಗಳೂರು, ಚೆನ್ನೈ-ಮೈಸೂರು ನಡುವೆ ವಂದೇಭಾರತ್‌ ರೈಲುಗಳು ಸಂಚರಿಸುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next