Advertisement

5 ರಿಂದ ಬೆಳಗಾವಿಯಿಂದ ಮಹಿಳಾ ಸೈಕಲ್‌ ರ್ಯಾಲಿ

06:00 AM Dec 01, 2018 | |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಮೀದ್‌ 1000 ಸೈಕ್ಲೋಥಾನ್‌ ಹಾಗೂ ಕೆಎಸ್‌ಆರ್‌ಪಿ ಜಂಟಿ ಸಹಯೋಗದಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಡಿ.5ರಿಂದ ಡಿ.12ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ “ಮಹಿಳಾ ಸೈಕಲ್‌’ ರ್ಯಾಲಿ ಆಯೋಜಿಸಿದೆ.

Advertisement

ಈ ರ್ಯಾಲಿಯಲ್ಲಿ ಒಟ್ಟು 100 ಮಂದಿ ಮಹಿಳೆಯರು ಭಾಗವಹಿಸಲಿದ್ದು, ಈ ಪೈಕಿ 50 ಮಂದಿ ಮಹಿಳಾ ಪೊಲೀಸ್‌ ಸಿಬ್ಬಂದಿ, 10 ಮಂದಿ ಮಹಿಳಾ ಐಎಎಸ್‌, ಐಪಿಎಸ್‌, ಕೆಎಎಸ್‌ ಮತ್ತು ಕೆಎಸ್‌ಪಿಎಸ್‌ ಅಧಿಕಾರಿಗಳು ಹಾಗೂ ಇತರೆ ಸಂಘ ಸಂಸ್ಥೆಗಳಿಂದ 40 ಮಂದಿ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಡಿ.4ರಂದು ಎಲ್ಲ ಸೈಕಲಿಸ್ಟ್‌ಗಳು ಬೆಳಗಾವಿಯಲ್ಲಿ ಒಂದೆಡೆ ಸೇರಲಿದ್ದಾರೆ. ಬಳಿಕ ಡಿ.5 ರಂದು ಆರಂಭವಾಗುವ ರ್ಯಾಲಿ ಬೆಳಗಾವಿಯಿಂದ ಹುಬ್ಬಳ್ಳಿ, 6ರಂದು ಹುಬ್ಬಳಿಯಿಂದ ರಾಣಿಬೆನ್ನೂರು, 7ರಂದು ರಾಣಿಬೆನ್ನೂರಿನಿಂದ ಚಿತ್ರದುರ್ಗ, 8ರಂದು ಚಿತ್ರದುರ್ಗದಿಂದ ತುಮಕೂರು ಹಾಗೂ 9ರಂದು ತುಮಕೂರಿನಿಂದ ಬೆಂಗಳೂರಿಗೆ ಬಂದು ತಲುಪಲಿದೆ.

ರ್ಯಾಲಿ ಉದ್ದೇಶ?: ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಸ್ವಚ್ಛ ಭಾರತ್‌, ವೃಕ್ಷಾರೋಹಣ, ಬಾಲ್ಯ ವಿವಾಹ ಪದ್ಧಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ, ಮಹಿಳಾ ನೈರ್ಮಲೀಕರಣ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಇತರೆ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಪ್ರಮುಖವಾಗಿ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ರ್ಯಾಲಿ ಸಾಗುವ ಮಾರ್ಗದಲ್ಲಿನ ಸರ್ಕಾರಿ ಮಹಿಳಾ ಕಾಲೇಜು, ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಸೈಕಲ್‌ ರ್ಯಾಲಿ ಆಯೋಜನಾ ಅಧ್ಯಕ್ಷರಾದ ಭಾಸ್ಕರ್‌ರಾವ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next