Advertisement

ಬೆಳಗಾವಿಯಿಂದ ಬೆಂಗಳೂರಿಗೆ ಮಹಿಳಾ ಸೈಕಲ್‌ ರ್ಯಾಲಿ 5ರಿಂದ

12:02 PM Dec 03, 2018 | Team Udayavani |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೈಕ್ಲಥಾನ್‌ ಹಾಗೂ ಕೆಎಸ್‌ಆರ್‌ಪಿ ಜಂಟಿ ಸಹಯೋಗದಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಡಿ.5ರಿಂದ ಡಿ.12ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ “ಮಹಿಳಾ ಸೈಕಲ್‌ ರ್ಯಾಲಿ’ ಆಯೋಜಿಸಿದೆ.

Advertisement

ಈ ಕುರಿತು ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌, ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಸ್ವತ್ಛ ಭಾರತ್‌, ವೃûಾರೋಹಣ, ಬಾಲ್ಯ ವಿವಾಹ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ, ಮಹಿಳಾ ನೈರ್ಮಲೀಕರಣ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಇತರೆ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೈಕಲ್‌ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರ್ಯಾಲಿಯಲ್ಲಿ 45 ಮಹಿಳಾ ಪೊಲೀಸ್‌ಪೇದೆಗಳು, 11 ಮಹಿಳಾ ಪೊಲೀಸ್‌ ಅಧಿಕಾರಿಗಳು, 4 ಮಂದಿ ಐಪಿಎಸ್‌ ಅಧಿಕಾರಿಗಳು ಮತ್ತು 40 ಮಂದಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಡಿ. 5ರಂದು ಬೆಳಗಾವಿಯಿಂದ ಈ ಸೈಕಲ್‌ ರ್ಯಾಲಿ ಆರಂಭವಾಗಲಿದೆ. ಪ್ರತಿದಿನ 100 ಕಿ.ಮೀ ವರೆಗೆ ರ್ಯಾಲಿ ಸಾಗಲಿದ್ದು, ಒಟ್ಟು 540 ಕಿ.ಮೀ ವ್ಯಾಪ್ತಿಯಷ್ಟು ಸೈಕಲ್‌ ರ್ಯಾಲಿ  ಮಾರ್ಗ ಮಧ್ಯೆ ಸಿಗುವ ಸರ್ಕಾರಿ ಮಹಿಳಾ ಕಾಲೇಜು ಮತ್ತು ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.

ಏಳು ದಿನಗಳ ರ್ಯಾಲಿಯಲ್ಲಿ ಬೆಳಗಾವಿಯಿಂದ ಹೊರಟ ರ್ಯಾಲಿ ಡಿ.6ರಂದು ಹುಬ್ಬಳ್ಳಿಗೆ ತಲುಪಲಿದೆ. ಅಲ್ಲಿಂದ ರಾಣೆ ಬೆನ್ನೂರಿಗೆ, ಡಿ.7ರಂದು ರಾಣೆಬೆನ್ನೂರಿನಿಂದ ಚಿತ್ರದುರ್ಗಕ್ಕೆ ತೆರಳಲಿದೆ. ಡಿ.8ರಂದು ಚಿತ್ರದುರ್ಗದಿಂದ ತುಮಕೂರಿಗೆ ಬಂದು ಡಿ.9ರಂದು ತುಮಕೂರಿನಿಂದ ಬೆಂಗಳೂರಿನಲ್ಲಿ ವಿಧಾನಸೌಧದ ಬಳಿ ರ್ಯಾಲಿ ಸಮಾರೋಪಗೊಳ್ಳಲಿದೆ ಎಂದು ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next