Advertisement

ಸುಳ್ಯ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಹಿಳಾ ಜಾಗ್ರತಿ ಶಿಬಿರ

10:24 AM Jan 22, 2020 | sudhir |

ಸುಳ್ಯ: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಎನ್.ಆರ್.ಸಿ, ಸಿ.ಎ.ಎ.ಮತ್ತು ಎನ್.ಪಿ.ಆರ್ ಕಾಯಿದೆಯನ್ನು ವಿರೋಧಿಸಿ ಮಹಿಳೆಯರ ಜನಜಾಗೃತಿ ಕಾರ್ಯಕ್ರಮ ಮಂಗಳವಾರ ಅನ್ಸಾರಿಯ ಯತೀಂಖಾನದ ಸಭಾಂಗಣದಲ್ಲಿ ನಡೆಯಿತು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವುಮೆನ್ ಇಂಡಿಯಾ ಮೂವ್ಮೆಂಟ್ ಇದರ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಒಂದು ಧರ್ಮದ ಆಧಾರದಲ್ಲಿ ವಿಭಜನಕಾರಿ‌ ನೀತಿ ಜಾರಿಗೆ ಬರುತ್ತಿದೆ. ದೇಶ ಫ್ಯಾಸಿಸ್ಟರ ಕೈಗೆ ಸಿಕ್ಕಿ ನಲುಗುತ್ತಿದ್ದು, ನಮ್ಮನ್ನು ದಮನಿಸುವ ಕಾರ್ಯ ನಿರಂತರವಾಗಿ‌ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನಾವು ಫ್ಯಾಸಿಸ್ಟರ ವಿರುದ್ಧ ಶಕ್ತವಾಗಿ ಹೋರಾಡಬೇಕಿದೆ ಎಂದರು.

ಇದಕ್ಕಾಗಿ ಮಹಿಳೆಯರ ಪಾತ್ರವು ಪ್ರಮುಖವಾಗಿದ್ದು,ಈ ಕಾಯಿದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆ ಇರುವುದಲ್ಲ ಪ್ರತೀಯೋರ್ವ ಭಾರತೀಯನಿಗು ಇದರಲ್ಲಿ ಸಮಸ್ಯೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಭಾರತದ ಸಂವಿಧಾನವನ್ನು ಉಳಿಸಲು ಮೂರನೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಎಲ್ಲಾ ಸಾಧ್ಯತೆಯು ಇದೆ. ಅದಕ್ಕಾಗಿ ಮಹಿಳೆಯರು ಈಗಲೇ ಮಾನಸಿಕವಾಗಿ ತಯಾರಾಗಬೇಕೆಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next