Advertisement
ಆರಂಭಿಕ ಲೆಕ್ಕಾಚಾರದಂತೆ ಭಾರತ- ಪಾಕಿಸ್ಥಾನ ನಡುವಿನ ಮುಖಾಮುಖೀ ಯನ್ನು ಹೈ ವೋಲ್ಟೆàಜ್ ಪಂದ್ಯವೆಂದೇ ಭಾವಿಸಲಾಗಿತ್ತು. ಆದರೆ ಯಾವಾಗ ಥಾಯ್ಲೆಂಡ್‌ನಂಥ ಸಾಮಾನ್ಯ ತಂಡಕ್ಕೆ ಪಾಕಿಸ್ಥಾನ ಶರಣಾಯಿತೋ, ಅಲ್ಲಿಗೆ ಕೌರ್ ಪಡೆಯೇ ಹಾಟ್ ಫೇವರಿಟ್ ಆಗಿ ಗೋಚರಿಸತೊಡಗಿದೆ.
ಶ್ರೀಲಂಕಾ ವಿರುದ್ಧ 41 ರನ್ ಅಂತ ರದಿಂದ ಗೆದ್ದು ಅಭಿಯಾನ ಆರಂಭಿಸಿದ ಭಾರತ, ಅನಂತರ ದುರ್ಬಲ ತಂಡ ಗಳಾದ ಮಲೇಷ್ಯಾ ಮತ್ತು ಯುಎಇ ವಿರುದ್ಧ ಸುಲಭ ಜಯವನ್ನೇ ಸಾಧಿ ಸಿತು. ಈಗಿನ ಫಾರ್ಮ್ ಪ್ರಕಾರ ಪಾಕಿಸ್ಥಾನವನ್ನು ಉರುಳಿಸುವುದು ಕೌರ್ ಬಳಗಕ್ಕೆ ದೊಡ್ಡ ಸವಾಲೇನೂ ಅನಿಸದು.
Related Articles
Advertisement
ಸತತ ಐದು ಗೆಲುವುಪಾಕಿಸ್ಥಾನವನ್ನು ಮಣಿಸುವುದು ಭಾರತದ ವನಿತೆಯರಿಗೆ ಯಾವತ್ತೂ ದೊಡ್ಡ ಸವಾಲೆನಿಸಲಿಲ್ಲ. ಕಳೆದ 5 ಪಂದ್ಯಗಳಲ್ಲಿ ಸುಲಭ ಜಯವನ್ನೇ ಸಾಧಿಸಿದೆ. ಇದರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಸಾಧಿಸಿದ ಗೆಲುವು ಕೂಡ ಸೇರಿದೆ. ಸತತ ಗೆಲುವು ಆರಕ್ಕೇರುವ ನಿರೀಕ್ಷೆ ಭಾರತದ ಕ್ರಿಕೆಟ್ ಪ್ರೇಮಿಗಳದ್ದು. ಪಾಕ್‌ಗೆ ಆಘಾತವಿಕ್ಕಿದ ಥಾಯ್ಲೆಂಡ್
ವನಿತಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅನನುಭವಿ ಥಾಯ್ಲೆಂಡ್ ತಂಡ ದೊಡ್ಡದೊಂದು ಏರುಪೇರಿನ ಫಲಿತಾಂಶ ದಾಖಲಿಸಿದೆ. ಪಾಕಿಸ್ಥಾನವನ್ನು 4 ವಿಕೆಟ್‌ಗಳಿಂದ ಕೆಡವಿ ಅಚ್ಚರಿ ಮೂಡಿಸಿದೆ. ಈ ಆಘಾತಕಾರಿ ಸೋಲಿನಿಂದ ಶುಕ್ರವಾರ ಭಾರತವನ್ನು ಎದುರಿಸಲಿರುವ ಪಾಕ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಗುರುವಾರದ ಮುಖಾಮುಖೀಯಲ್ಲಿ ಪಾಕಿಸ್ಥಾನವನ್ನು ಹಿಡಿದು ನಿಲ್ಲಿಸಲು ಥಾಯ್ಲೆಂಡ್ ಬೌಲರ್ ಧಾರಾಳ ಯಶಸ್ಸು ಕಂಡರು. ಸತತ 3ನೇ ಗೆಲುವಿನ ಯೋಜನೆ ಹಾಕಿಕೊಂಡಿದ್ದ ಪಾಕ್‌ಗೆ ಗಳಿಸಲು ಸಾಧ್ಯವಾದ್ದು 5 ವಿಕೆಟಿಗೆ 116 ರನ್ ಮಾತ್ರ. ಥಾಯ್ಲೆಂಡ್ 19.5 ಓವರ್‌ಗಳಲ್ಲಿ 6 ವಿಕೆಟಿಗೆ 117 ರನ್ ಬಾರಿಸಿ ಅಂಕದ ಖಾತೆ ತೆರೆಯಿತು. ಇದು ಕಳೆದ 4 ವರ್ಷಗಳಲ್ಲಿ ಥಾಯ್ಲೆಂಡ್ ವನಿತೆಯರು ಸಾಧಿಸಿದ 4ನೇ ದೊಡ್ಡ ಗೆಲುವು. ಇದಕ್ಕೂ ಮೊದಲು 2018ರಲ್ಲಿ ಶ್ರೀಲಂಕಾವನ್ನು, 2021ರಲ್ಲಿ ಜಿಂಬಾಬ್ವೆಯನ್ನು 2 ಸಲ ಸೋಲಿಸಿತ್ತು. ಪಾಕಿಸ್ಥಾನವನ್ನು ಪರಾಭವಗೊಳಿಸಿದ್ದು ಇದೇ ಮೊದಲು.