ಲಂಡನ್: ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ನ ಹಿಡಿತ ಬಿಗಿಗೊಂಡಿದೆ. ಪ್ರವಾಸಿ ಶ್ರೀಲಂಕಾ ಗೆಲುವಿಗೆ 483 ರನ್ನುಗಳ ಕಠಿನ ಗುರಿ ನೀಡಿದೆ.
231 ರನ್ನುಗಳ ಭಾರೀ ಮುನ್ನಡೆಯ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಶನಿವಾರ 3ನೇ ದಿನದ ಬ್ಯಾಟಿಂಗ್ ಮುಂದುವರಿಸಿ 251 ರನ್ ಗಳಿಸಿತು. ಇದರಲ್ಲಿ ಜೋ ರೂಟ್ ಗಳಿಕೆ 103 ರನ್. 121 ಎಸೆತ ಎದುರಿಸಿ ನಿಂತ ಅವರು 10 ಬೌಂಡರಿ ಬಾರಿಸಿದರು.
ಇದರೊಂದಿಗೆ ರೂಟ್ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 4ನೇ ಸಾಧಕನಾಗಿ ಮೂಡಿಬಂದರು. ಉಳಿದ ಮೂವರೆಂದರೆ ವೆಸ್ಟ್ ಇಂಡೀಸ್‌ನ ಜಾರ್ಜ್ ಹ್ಯಾಡ್ಲಿ, ಇಂಗ್ಲೆಂಡ್‌ನ ಗ್ರಹಾಂ ಗೂಚ್ ಮತ್ತು ಮೈಕಲ್ ವಾನ್. ಮೊದಲ ಇನ್ನಿಂಗ್ಸ್‌ನಲ್ಲಿ ರೂಟ್ 143 ರನ್ ಬಾರಿಸಿದ್ದರು.
ಇದು ರೂಟ್ ಅವರ 145ನೇ ಟೆಸ್ಟ್ ಆಗಿದ್ದು, 34ನೇ ಶತಕ ಸಂಭ್ರಮ. ಶತಕ ಸಾಧನೆಯಲ್ಲಿ ಅವರು ಗಾವಸ್ಕರ್, ಲಾರಾ, ಜಯವರ್ಧನೆ ಮತ್ತು ಮೊಹ್ಸಿನ್ ಖಾನ್ ದಾಖಲೆಯನ್ನು ಸರಿದೂಗಿಸಿದರು.
ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 196ಕ್ಕೆ ಆಲೌಟ್ ಆಗಿತ್ತು. ಬ್ಯಾಟಿಂಗ್ ಆರಂಭಿಸಿರುವ ಲಂಕಾ 53 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.