ದಂಬುಲಾ: ಇಲ್ಲಿ ಭಾನುವಾರ (ಜುಲೈ 28) ದಲ್ಲಿ ನಡೆದ T20ಏಷ್ಯಾ ಕಪ್ ಫೈನಲ್ ನಲ್ಲಿ ಶ್ರೀಲಂಕಾ ತಂಡ ಏಳು ಬಾರಿಯ ಚಾಂಪಿಯನ್ ಭಾರತದ ವಿರುದ್ಧ ಎಂಟು ವಿಕೆಟ್‌ಗಳ ಅಮೋಘ ಜಯದೊಂದಿಗೆ ಚೊಚ್ಚಲ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಹರ್ಷಿತಾ ಸಮರವಿಕ್ರಮ ಮತ್ತು ನಾಯಕಿ ಚಾಮರಿ ಅತ್ತಪಟ್ಟು ಅವರ ಚುರುಕಿನ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ಸುಲಭ ಜಯ ತನ್ನದಾಗಿಸಿಕೊಂಡಿತು. ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವನಿತೆಯರ ತಂಡಕ್ಕೆ ಇದು ಆರನೇ ಫೈನಲ್ ಆಗಿದ್ದು, ಅಂತಿಮವಾಗಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಮೃತಿ ಮಂಧಾನ ಅವರ ಸತತ ಎರಡನೇ ಅರ್ಧಶತಕ ಮತ್ತು ರಿಚಾ ಘೋಷ್ ಅವರ ಆಟದಿಂದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಶ್ರೀಲಂಕಾವು ನಿರ್ಣಾಯಕ ಘಟ್ಟದಲ್ಲಿ ಹಾಲಿ ಚಾಂಪಿಯನ್‌ಗಳಿಗೆ ಸರಿಯಾದ ಬ್ಯಾಟಿಂಗ್ ಆವೇಗ ತೋರುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು.
ಅಟ್ಟಪಟ್ಟು (43 ಎಸೆತಗಳಲ್ಲಿ 61) ಅವರು ಹರ್ಷಿತಾ ಸಮರವಿಕ್ರಮ ಅವರೊಂದಿಗೆ 87 ರನ್‌ಗಳ ಜತೆಯಾಟವಾಡಿದರು. ಎಂಟು ಎಸೆತಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್‌ಗಳಲ್ಲಿ 165/6 (ಸ್ಮೃತಿ ಮಂಧಾನ 60, ರಿಚಾ ಘೋಷ್ 30, ಜೆಮಿಮಾ ರೊಡ್ರಿಗಸ್ 29; ಕವಿಶಾ ದಿಲ್ಹಾರಿ 2-36) ಶ್ರೀಲಂಕಾ 18.4 ಓವರ್‌ಗಳಲ್ಲಿ 167/2 (ಹರ್ಷಿತಾ ಸಮರವಿಕ್ರಮ 69, ಪತ್ತುಮರಿ ಎ16 ದಿಲ್ಹರಿ 30*’; ದೀಪ್ತಿ ಶರ್ಮ 1-30)