Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 4 ವಿಕೆಟಿಗೆ 161 ರನ್ ಪೇರಿಸಿದರೆ, ಮಲೇಷ್ಯಾ ಚೇಸಿಂಗ್ ವೇಳೆ ಮಳೆ ಸುರಿಯಿತು. ಪಂದ್ಯ 5.2 ಓವರ್‌ಗಳಿಗೆ ನಿಂತಿತು. ಮಲೇಷ್ಯಾ 2 ವಿಕೆಟ್ ಕಳೆದುಕೊಂಡು 16 ರನ್ ಮಾಡಿತ್ತು. ಆಗ ಅದು 46 ರನ್ ಗಳಿಸಬೇಕಿತ್ತು.
ಉಪನಾಯಕಿ ಸ್ಮತಿ ಮಂಧನಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲು ಇನ್ನಿಂಗ್ಸ್ ಆರಂಭಿಸಿದ ಎಸ್. ಮೇಘನಾ ಮಿಂಚಿನ ಆಟವಾಡಿದರು. 53 ಎಸೆತಗಳಿಂದ 69 ರನ್ ಬಾರಿಸಿದರು (11 ಬೌಂಡರಿ, 1 ಸಿಕ್ಸರ್).
ತೀವ್ರ ಬ್ಯಾಟಿಂಗ್ ಬರಗಾಲದಲ್ಲಿದ್ದ ಶಫಾಲಿ ವರ್ಮ 46 ರನ್ ಹೊಡೆದು ಲಯ ಕಂಡುಕೊಂಡರು (1 ಬೌಂಡರಿ, 3 ಸಿಕ್ಸರ್). ರಿಚಾ ಘೋಷ್ ಅಜೇಯ 33 ರನ್ ಮಾಡಿದರು. ಆದರೆ ಕಿರಣ್ ಪ್ರಭು “ಗೋಲ್ಡನ್ ಡಕ್’ ಸಂಕಟಕ್ಕೆ ಸಿಲುಕಿದರು. ಕಳೆದ ಪಂದ್ಯದಲ್ಲಿ ಸಿಡಿದಿದ್ದ ಜೆಮಿಮಾ ರೋಡ್ರಿಗಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಸ್ ಇಳಿಯಲಿಲ್ಲ.
Related Articles
Advertisement
ಭಾರತ ಮಂಗಳವಾರ ಯುಎಇ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-4 ವಿಕೆಟಿಗೆ 181 (ಮೇಘನಾ 69, ಶಫಾಲಿ 46, ರಿಚಾ 33, ನುರ್ ದಾನಿಯಾ 9ಕ್ಕೆ 2). ಮಲೇಷ್ಯಾ-5.2 ಓವರ್‌ಗಳಲ್ಲಿ 2 ವಿಕೆಟಿಗೆ 16. ಪಂದ್ಯಶ್ರೇಷ್ಠ: ಎಸ್. ಮೇಘನಾ.
ಪಾಕ್‌ಗೆ 9 ವಿಕೆಟ್ ಜಯದಿನದ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ಆತಿಥೇಯ ಬಾಂಗ್ಲಾದೇಶವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತು. ಬಾಂಗ್ಲಾ 8 ವಿಕೆಟಿಗೆ ಗಳಿಸಿದ್ದು 70 ರನ್ ಮಾತ್ರ. ಪಾಕಿಸ್ಥಾನ 12.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 72 ರನ್ ಮಾಡಿತು. ಪಾಕ್ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನೂ 9 ವಿಕೆಟ್‌ಗಳಿಂದ ಸೋಲಿಸಿತ್ತು.