ಶುಕ್ರವಾರ “ರಣಗಿರಿ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ನಡೆದ “ಎ’ ವಿಭಾಗದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 19.2 ಓವರ್‌ಗಳಲ್ಲಿ 108ಕ್ಕೆ ಕುಸಿದರೆ, ಭಾರತ 14.1 ಓವರ್‌ಗಳಲ್ಲಿ 3 ವಿಕೆಟಿಗೆ 109 ರನ್ ಬಾರಿಸಿತು.ಭಾರತ ತನ್ನ ದ್ವಿತೀಯ ಪಂದ್ಯವನ್ನು ರವಿವಾರ ಯುಎಇ ವಿರುದ್ಧ ಆಡಲಿದೆ.
Advertisement
ಚೇಸಿಂಗ್ ವೇಳೆ ಶಫಾಲಿ ವರ್ಮ ಮತ್ತು ಸ್ಮತಿ ಮಂಧನಾ ಬಿರುಸಿನ ಆಟಕ್ಕಿಳಿದರು. ಪವರ್ ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಹರಿದು ಬಂತು. ಅಷ್ಟರಲ್ಲೇ ಭಾರತದ ಆರಂಭಿಕರು 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ಥಾನಕ್ಕೆ ಯೋಜನೆಯಂತೆ ಆಡಲು ಸಾಧ್ಯವಾಗಲಿಲ್ಲ. ಭಾರತದ ಬಿಗಿಯಾದ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿತು. ದೀಪ್ತಿ ಶರ್ಮ (3), ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ಸೇರಿಕೊಂಡು (ತಲಾ 2 ವಿಕೆಟ್) ಭರ್ಜರಿ ಕಡಿವಾಣ ಹಾಕಿದರು.
Related Articles
Advertisement
ಪಾಕ್ ಸರದಿಯಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೋರ್ವ ಆಟಗಾರ್ತಿ ಕೀಪರ್ ಮುನೀಬಾ ಅಲಿ (11). ಮೂವರು ರನ್ ಖಾತೆ ತೆರೆಯಲು ವಿಫಲರಾದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-19.2 ಓವರ್‌ಗಳಲ್ಲಿ 108 (ಸಿದ್ರಾ ಅಮೀನ್ 25, ತುಬಾ ಹಸನ್ 22, ಫಾತಿಮಾ ಸನಾ ಔಟಾಗದೆ 22, ದೀಪ್ತಿ 20ಕ್ಕೆ 3, ಶ್ರೇಯಾಂಕಾ 14ಕ್ಕೆ 2, ರೇಣುಕಾ 14ಕ್ಕೆ 2, ಪೂಜಾ 31ಕ್ಕೆ 2). ಭಾರತ-14.1 ಓವರ್‌ಗಳಲ್ಲಿ 3 ವಿಕೆಟಿಗೆ 109 (ಮಂಧನಾ 45, ಶಫಾಲಿ 40, ಅರೂಬ್ ಶಾ 9ಕ್ಕೆ 2).
ಪಂದ್ಯಶ್ರೇಷ್ಠ: ದೀಪ್ತಿ ಶರ್ಮ
ಯುಎಇಯನ್ನು ಮಣಿಸಿದ ನೇಪಾಲಡಂಬುಲ (ಶ್ರೀಲಂಕಾ): ಏಷ್ಯಾ ಕಪ್ ಮೊದಲ ಪಂದ್ಯದಲ್ಲಿ ನೇಪಾಲ 6 ವಿಕೆಟ್‌ಗಳಿಂದ ಯುಎಇಯನ್ನು ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಯುಎಇ 8 ವಿಕೆಟಿಗೆ 115 ರನ್ ಮಾಡಿದರೆ, ನೇಪಾಲ 16.1 ಓವರ್‌ಗಳಲ್ಲಿ 4 ವಿಕೆಟಿಗೆ 118 ರನ್ ಬಾರಿಸಿತು. ನೇಪಾಲ ಪರ ಮಿಂಚಿದವರೆಂದರೆ ನಾಯಕಿಯೂ ಆಗಿರುವ ಮಧ್ಯಮ ವೇಗಿ ಇಂದು ಬರ್ಮ ಮತ್ತು ಓಪನರ್ ಸಮ್ಜಾನಾ ಖಡಾ. ಇಂದು ಬರ್ಮ 19ಕ್ಕೆ 3 ವಿಕೆಟ್ ಉರುಳಿಸಿದರೆ, ಸಮ್ಜಾನಾ ಖಡಾR ಅಜೇಯ 72 ರನ್ ಬಾರಿಸಿದರು. 45 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಸೇರಿತ್ತು. ಖಡಾR ಹೊರತು ಪಡಿಸಿ ಉಳಿದವರ್ಯಾರೂ ನೇಪಾಲದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಲಿಲ್ಲ. ಉರುಳಿದ 4 ವಿಕೆಟ್‌ಗಳಲ್ಲಿ 3 ಕವಿಶಾ ಎಗೋಡಗೆ ಪಾಲಾಯಿತು. ಯುಎಇ ಪರ ಖುಶಿ ಶರ್ಮ 36, ಕವಿತಾ 22 ರನ್ ಮಾಡಿದರು.