Advertisement

ಕ್ರೀಡೆಯಲ್ಲಿ ಮಹಿಳೆಯರ ಸಾಧನೆ: ಸನ್ಮಾನ

04:26 PM Jun 07, 2022 | Team Udayavani |

ಚಿಂತಾಮಣಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಥ್ರೋಬಾಲ್‌ನಲ್ಲಿ ಸತತವಾಗಿ 8ನೇ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಹಾಗೂ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಸತತವಾಗಿ 2ನೇ ಬಾರಿಗೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಿಂತಾಮಣಿ ತಾಲೂಕಿಗೆ ಮಹಿಳೆ ತಂಡಗಳು ಕೀರ್ತಿಯನ್ನು ತಂದಿದ್ದು ಅವರನ್ನು ಶಾಸಕ ಕೃಷ್ಣಾರೆಡ್ಡಿ ಸನ್ಮಾನಿಸಿದರು.

Advertisement

ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಸ್ಪರ್ದೆಗಳಲ್ಲಿ ಚಿಂತಾಮಣಿಯ ಮಹಿಳಾ ಥ್ರೋಬಾಲ್‌ ತಂಡದ ನಾಯಕಿ ಕೆ.ಸಿ. ಚಂದ್ರಮ್ಮ ತಂಡ ಸತತವಾಗಿ ಎಂಟು ಬಾರಿ ಭಾಗವಹಿಸಿ ಅಷ್ಟೂ ಬಾರಿ ಪ್ರಥಮ ಸ್ಥಾನ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಮಹಿಳಾ ಬಾಲ್‌ ಬ್ಯಾಡ್ಮಿಂಟನ್‌ ತಂಡದ ನಾಯಕಿ ಜಯಲಕ್ಷ್ಮಮ್ಮ ನೇತೃತ್ವದ ತಂಡ ಬ್ಯಾಲ್‌ ಬ್ಯಾಡ್ಮಿಂಟನ್‌ ಸ್ಪರ್ದೆಯಲ್ಲಿ ಎರಡು ಬಾರಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಎರಡು ಬಾರಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ. ಈಜು ಸ್ಪರ್ದೆ ಯಲ್ಲಿ ಮಂಜುನಾಥ್‌ ರವರು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿತಂದಿದ್ದಾರೆ.

ಸ್ಪರ್ಧೆಗಳಲ್ಲಿ ಭಾಗವ ಹಿಸಿದ ತಂಡಗಳಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಶಾಸಕ ಕೃಷ್ಣಾರೆಡ್ಡಿ ಮಾತನಾಡಿ, ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಮಹಿಳಾ ತಂಡಗಳ ಸಾಧನೆ ತಾಲೂಕು- ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ ಎಂದರು. ಇನ್ನೂ ಇದೇ ವೇಳೆ ಶಾಸಕ ಕೃಷ್ಣಾರೆಡ್ಡಿಯವರು ಥ್ರೋಬಾಲ್‌ ಹಾಗೂ ಬಾಲ್‌ ಬ್ಯಾಡ್ಮಿಂಟನ್‌ ತಂಡಗಳಿಗೆ ನೇಟ್‌, ಬಾಲ್‌ ಮತಿತ್ತರ ಕ್ರೀಡಾ ಸಾಮಗ್ರಿ ಕೊಡುಗೆಯಾಗಿ ನೀಡಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ ಜನಾರ್ದನರೆಡ್ಡಿ, ಗೌರವಾಧ್ಯಕ್ಷ ಭೈರಾರೆಡಿª, ಉಪಾಧ್ಯಕ್ಷ ಜನಾರ್ದನಮೂರ್ತಿ, ಖಜಾಂಚಿ ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಶಿವರಾಜ್‌, ಕ್ರೀಡಾ ಕಾರ್ಯದರ್ಶಿ ರೆಡ್ಡಪ್ಪ, ನಗರಸಭಾ ಸದಸ್ಯ ಮಂಜುನಾಥ್‌, ಕಸಾಪ ಅಧ್ಯಕ್ಷ ದೇವತಾ ದೇವರಾಜ್‌, ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ, ನಿವೃತ ಶಿಕ್ಷಕ ಗೋಪಾಲರೆಡ್ಡಿ, ತರಬೇತಿದಾರರಾದ ಮಂಜುನಾಥ್‌, ಬಾಬುರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next