Advertisement

ವನಿತಾ ವಿಶ್ವಕಪ್‌ ಫ‌ುಟ್ಬಾಲ್: ಪ್ರಶಸ್ತಿ ಉಳಿಸಿಕೊಂಡ ಅಮೆರಿಕ

02:33 AM Jul 09, 2019 | Team Udayavani |

ಲಿಯನ್‌ (ಫ್ರಾನ್ಸ್‌): ಮೆಗಾನ್‌ ರ್ಯಾಪಿನೋಯಿ ಅವರ ಪೆನಾಲ್ಟಿ ಮತ್ತು ರೋಸ್‌ ಲಾವೆಲ್ಲೆ ಅವರ ಸೂಪರ್‌ ಗೋಲಿನಿಂದಾಗಿ ಅಮೆರಿಕ ತಂಡ ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಕೂಟದ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಫೈನಲ್ ಹೋರಾಟದಲ್ಲಿ ಅಮೆರಿಕ ಎದುರಾಳಿ ನೆದರ್ಲೆಂಡ್ಸ್‌ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ವಿಜಯೋತ್ಸವ ಆಚರಿಸಿತು.

ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿ ಕೊಂಡಿರುವ ಅಮೆರಿಕ, ಕಳೆದ 8 ವಿಶ್ವಕಪ್‌ ಕೂಟಗಳಲ್ಲಿ 4ನೇ ಬಾರಿ ಪ್ರಶಸ್ತಿ ಗೆದ್ದು ವನಿತಾ ವಿಶ್ವಕಪ್‌ ಫ‌ುಟ್ಬಾಲ್ನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.

ಕಾರ್ನರ್‌ ಅಲ್ಲ ಪೆನಾಲ್ಟಿ
ಫ್ರಾನ್ಸ್‌ನ ರೆಫ್ರಿ ಸ್ಟಿಫಾನಿ ಫ್ರಾಪಾರ್ಟ್‌ ಮೊದಲಿಗೆ ಕಾರ್ನರ್‌ ನೀಡಿದ್ದರು. ಆದರೆ ಆಟಗಾರ್ತಿಯರ ಮನವಿಯ ಮೇರೆಗೆ ವಿಎಆರ್‌ ಮೂಲಕ ಪರಿಶೀಲನೆ ನಡೆಸಿದ ಬಳಿಕ ಪೆನಾಲ್ಟಿ ನೀಡಲಾಯಿತು. ಹೀಗಾಗಿ ಅಮೆರಿಕ ಮುನ್ನಡೆ ಸಾಧಿಸುವಂತಾಯಿತು.

ರೋಸ್‌ ಲಾವೆಲ್ಲೆ 69ನೇ ನಿಮಿಷದಲ್ಲಿ ಅದ್ಭುತ ಗೋಲನ್ನು ಹೊಡೆದು ಮುನ್ನಡೆಯನ್ನು 2-0ಗೆ ಏರಿಸಿದರು. ಇದರಿಂದ ತಿರುಗೇಟು ನೀಡುವ ನೆದರ್ಲೆಂಡ್ಸ್‌ ಭರವಸೆಗೆ ಹೊಡೆತ ಬಿತ್ತು.

Advertisement

ಅಮೆರಿಕ ಸತತ 3 ಬಾರಿ ವಿಶ್ವಕಪ್‌ನಫೈನಲ್ನಲ್ಲಿ ಆಡಿದ ಮೊದಲ ತಂಡ ವಾಗಿದೆ. ತಂಡದ ಕೋಚ್ ಜಿಲ್ ಎಲ್ಲಿಸ್‌ 1930ರ ಬಳಿಕ ಸತತ 2 ಬಾರಿ ವಿಶ್ವಕಪ್‌ ಗೆದ್ದ ಮೊದಲ ಕೋಚ್ ಆಗಿದ್ದಾರೆ. 1930ರಲ್ಲಿ ಇಟಲಿಯ ವಿಟ್ಟೋರಿಯೊ ಈ ಸಾಧನೆ ಮಾಡಿದ್ದರು.

ರ್ಯಾಪಿನೋಯಿ ಗರಿಷ್ಠ ಗೋಲು

ನೆದರ್ಲೆಂಡ್ಸ್‌ನ ಗೋಲ್ಕೀಪರ್‌ ಸಾರಿ ವಾನ್‌ ವೀನೆಂಡಾಲ್ ಅವರ ಅದ್ಭುತ ನಿರ್ವಹಣೆಯಿಂದಾಗಿ ಅಮೆರಿಕ ಮುನ್ನಡೆ ಸಾಧಿಸಲು ವಿಫ‌ಲವಾಯಿತು. ಅಮೆರಿಕ ಆಟಗಾರ್ತಿಯರ ಗೋಲು ಹೊಡೆಯುವ ಹಲವು ಪ್ರಯತ್ನಗಳನ್ನು ವೀನೆಂಡಾಲ್ ತಡೆಯುವಲ್ಲಿ ಯಶಸ್ವಿಯಾದರು. ಆದರೆ ಒಂದು ತಾಸಿನ ಬಳಿಕ ರ್ಯಾಪಿನೋಯಿ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಹೊಡೆದು ಅಮೆರಿಕಕ್ಕೆ ಮುನ್ನಡೆ ಒದಗಿಸಿದರು. ಈ ವಿಶ್ವಕಪ್‌ನ ಸ್ಟಾರ್‌ ಆಗಿರುವ ಅವರು ಒಟ್ಟು ಆರು ಗೋಲು ಹೊಡೆದು ಗರಿಷ್ಠ ಗೋಲು ಹೊಡೆದ ಜಂಟಿ ಆಟಗಾರ್ತಿ ಎನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next