Advertisement

ವನಿತಾ ವಿಶ್ವಕಪ್‌ ಕ್ರಿಕೆಟ್‌: ಆಸ್ಟ್ರೇಲಿಯ, ಇಂಗ್ಲೆಂಡ್‌ ಗೆಲುವು

03:45 AM Jul 04, 2017 | Team Udayavani |

ಬ್ರಿಸ್ಟಲ್‌/ಟಾಂಟನ್‌: ರವಿವಾರದ ಉಳಿದೆರಡು ವನಿತಾ ವಿಶ್ವಕಪ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯ ಹಾಗೂ ಆತಿಥೇಯ ಇಂಗ್ಲೆಂಡ್‌ ಜಯ ಸಾಧಿಸಿವೆ.

Advertisement

ಬ್ರಿಸ್ಟಲ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ 5 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡನ್ನು ಮಣಿಸಿತು. ಟಾಂಟನ್‌ ಮುಖಾಮುಖೀಯಲ್ಲಿ ಇಂಗ್ಲೆಂಡ್‌ 7 ವಿಕೆಟ್‌ ಅಂತರದಿಂದ ಶ್ರೀಲಂಕಾಕ್ಕೆ ಸೋಲುಣಿಸಿತು.

ಬ್ರಿಸ್ಟಲ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಗಳಿಸಿದ್ದು 9 ವಿಕೆಟಿಗೆ 219 ರನ್‌. ಆಸ್ಟ್ರೇಲಿಯ 48.4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ ಬಾರಿಸಿ ಭಾರತದಂತೆ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿತು. ಆದರೆ ರನ್‌ರೇಟ್‌ನಲ್ಲಿ ಹಿಂದಿರುವುದರಿಂದ ಆಸೀಸ್‌ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಉಳಿದಿದೆ (+0.724). ಭಾರತ +1.110 ರನ್‌ರೇಟ್‌ನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ.

ಆಸ್ಟ್ರೇಲಿಯ ಪರ ಎಲಿಸಾ ಪೆರ್ರಿ 71 ರನ್‌, ಶಟ್‌ ಮತ್ತು ಜೊನಾಸೆನ್‌ ತಲಾ 3 ವಿಕೆಟ್‌ ಕಿತ್ತರು. ನ್ಯೂಜಿಲ್ಯಾಂಡ್‌ ಸರದಿಯಲ್ಲಿ ಬೇಟ್ಸ್‌ (51) ಮತ್ತು ಪರ್ಕಿನ್ಸ್‌ (52) ಅರ್ಧ ಶತಕ ದಾಖಲಿಸಿದರು. ಇದು 3 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡಿಗೆ ಎದುರಾದ ಮೊದಲ ಸೋಲು. 

ನ್ಯೂಜಿಲ್ಯಾಂಡ್‌ ಒಂದು ಪಂದ್ಯ ಜಯಿಸಿದ್ದು, ಇನ್ನೊಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಸದ್ಯ 3 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

Advertisement

ಇಂಗ್ಲೆಂಡ್‌ 2ನೇ ಜಯ
ಭಾರತದ ವಿರುದ್ಧ ಸೋಲಿನ ಆಘಾತಕ್ಕೆ ಸಿಲುಕಿದ ಬಳಿಕ ಆತಿಥೇಯ ಇಂಗ್ಲೆಂಡ್‌ ಗೆಲುವಿನ ಹಾದಿ ಹಿಡಿದಿದ್ದು, ಸತತ 2 ಪಂದ್ಯಗಳಲ್ಲಿ ವಿಜಯೋತ್ಸವ ಆಚರಿಸಿದೆ. ಟಾಂಟನ್‌ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 8 ವಿಕೆಟಿಗೆ 204 ರನ್‌ ಗಳಿಸಿದರೆ, ಇಂಗ್ಲೆಂಡ್‌ 30.2 ಓವರ್‌ಗಳಲ್ಲಿ 3 ವಿಕೆಟಿಗೆ 206 ರನ್‌ ಬಾರಿಸಿತು. ನಾಯಕಿ ಹೀತರ್‌ ನೈಟ್‌ 82, ಕೀಪರ್‌ ಸಾರಾ ಟಯ್ಲರ್‌ 74 ರನ್‌ ಬಾರಿಸಿ ಮೆರೆದರು. ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 148 ರನ್‌ ಒಟ್ಟುಗೂಡಿತು.

ಇದು ಶ್ರೀಲಂಕಾಕ್ಕೆ ಎದುರಾದ ಸತತ 3ನೇ ಸೋಲು. ಪಾಕಿಸ್ಥಾನ ಮತ್ತು ವೆಸ್ಟ್‌ ಇಂಡೀಸ್‌ ಕೂಡ ಆಡಿದ ಎಲ್ಲ 3 ಪಂದ್ಯಗಳನ್ನು ಸೋತು ತಳ ಸೇರಿವೆ.

ಸೋಮವಾರ ಮತ್ತು ಮಂಗಳವಾರ ಪಂದ್ಯಾವಳಿಗೆ ವಿರಾಮ. ಜು. 5ರಂದು ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ, ಭಾರತ-ಶ್ರೀಲಂಕಾ ಮತ್ತು ಆಸ್ಟ್ರೇಲಿಯ-ಪಾಕಿಸ್ಥಾನ ಮುಖಾಮುಖೀಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next