Advertisement

ಬೇಡಿಕೆ ಈಡೇರಿಕೆಗೆ ಮಹಿಳಾ ಕಾರ್ಮಿಕರ ಆಗ್ರಹ

11:23 AM Sep 04, 2019 | Suhan S |

ಗೌರಿಬಿದನೂರು: ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಆಗ್ರಹಿಸಿ ರೇಮಾಂಡ್ಸ್‌ ಕಾರ್ಖಾನೆಯ ಸುಮಾರು 2450 ಮಹಿಳಾ ಕಾರ್ಮಿಕರು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಕಳೆದ ಭಾನುವಾರ ಕಾರ್ಖಾನೆಯ ಮಹಿಳಾ ಕಾರ್ಮಿಕರು ಕೆಲಸ ಮುಗಿಸಿಕೊಂಡು ಆಟೋದಲ್ಲಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾಗ ಖಾಸಗಿ ಬಸ್‌ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ 3 ಜನ ಸಾವನ್ನಪ್ಪಿ, 8 ಜನರು ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ರಜೆ ನೀಡಲಿ: ನಮ್ಮ ಬೇಡಿಕೆಯಂತೆ ಕಾರ್ಖಾನೆಯ ಆಡಳಿತ ಮಂಡಳಿ ಪ್ರತಿ ಭಾನುವಾರ ರಜೆ ನೀಡಿದ್ದರೆ ನಮ್ಮ ಸಹಪಾಠಿಗಳು ಸಾವನ್ನಪ್ಪುತ್ತಿರಲಿಲ್ಲ. ಈ ಸಾವಿಗೆ ಕಾರ್ಖಾನೆಯ ಹಿರಿಯ ಅಧಿಕಾರಿಗಳ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಕೇವಲ 7,200 ವೇತನ ನೀಡುತ್ತಿದ್ದು ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ಕೆಲಸ ಮಾಡಬೇಕಿದೆ. ಆದರೆ ವೇತನ ಮಾತ್ರ ಹೆಚ್ಚಿಸಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ರಜೆ ನೀಡುತ್ತಿಲ್ಲ ಎಂದು ದೂರಿದರು.

ಸಂಬಳ ಕಡಿತ: ಅನಿವಾರ್ಯವಾಗಿ ಅರ್ಧ ಗಂಟೆ ವಿಳಂಬವಾಗಿ ಬಂದರೆ ಅರ್ಧ ದಿನದ ಸಂಬಳ ಕಡಿತ ಮಾಡುತ್ತಾರೆ. ನಾವೇ ರಜೆ ತೆಗೆದುಕೊಂಡರೆ 500 ರೂ. ಕಡಿತ ಮಾಡುತ್ತಾರೆ. ಅವರೇ ರಜೆ ನೀಡಿದರೆ 200 ಕಡಿತ ಮಾಡುತ್ತಾರೆ. ಕಾರ್ಖಾನೆ ಮಹಿಳಾ ಅಧಿಕಾರಿ ಮಣಿ ಎಂಬುವವರು ಕಾರ್ಮಿಕ‌ರಿಗೆ ಕಿರುಕುಳ ನೀಡುತ್ತಾರೆ. ಅನಗತ್ಯ ನಿಬಂಧನೆಗಳನ್ನು ವಿಧಿಸುತ್ತಾರೆ. ಅವರ ಮೇಲೆ ಕ್ರಮಕೈಗೊಳ್ಳಬೇಕು. ಮಹಿಳೆಯರ ವೈಯಕ್ತಿಕ ಆರೋಗ್ಯ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.

Advertisement

ಬಸ್‌ ವ್ಯವಸ್ಥೆ ಕಲ್ಪಿಸಲಿ: 10 ಸಾವಿರ ರೂ. ಸಂಬಳ ಕೊಡಬೇಕು. ಗ್ರಾಮಗಳಿಗೆ ತೆರಳಲು ಬಸ್‌ ವ್ಯವಸ್ಥೆ ಮಾಡಬೇಕು, ಪ್ರತಿ ಭಾನುವಾರ ಕಡ್ಡಾಯವಾಗಿ ರಜೆ ನೀಡಬೇಕು, ಅನಾರೋಗ್ಯ, ವೈಯಕ್ತಿಕ ಆರೋಗ್ಯಗಳ ಸಮಸ್ಯೆಯಾದಾಗ ಮಹಿಳಾ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆಗೆ ಹಾಗೂ ರಜೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಅಳಲು: ಒಂದು ವೃತ್ತಿಗೆ ನಮ್ಮನ್ನು ನೇಮಕ ಮಾಡಿ ಕೊಂಡು ಮೂರು ರೀತಿಯ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಊಟಕ್ಕೆ ಅರ್ಧಗಂಟೆ ಸಮಯವಿದ್ದರೂ ಹತ್ತು ನಿಮಿಷಕ್ಕೆ ವಿಜಲ್ ಹಾಕುತ್ತಾರೆ. ಕಡ್ಡಾಯವಾಗಿ ಷೂ ಹಾಕಿಕೊಂಡು ಬರಬೇಕೆಂದು ಒತ್ತಾಯ ಮಾಡು ತ್ತಾರೆ ಎಂದು ವಿವಿಧ ಮಹಿಳಾ ಕಾರ್ಮಿಕರು ಅಳಲು ತೋಡಿಕೊಂಡರು.

ಈ ಮಧ್ಯೆ ಕಾರ್ಖಾನೆ ಉತ್ಪಾದನಾ ವಿಭಾಗದ ಹಿರಿಯ ವ್ಯವಸ್ಥಾಪಕ ನರಸಪ್ಪ ಮಾತನಾಡಿ, ಕಾರ್ಖಾನೆಯ ಮಂಡಳಿಯೊಂದಿಗೆ ಚರ್ಚಿಸಿ 20 ದಿನಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕ ಅಮರನಾರಾಯಣ, ನಗರ ಠಾಣೆ ಪಿಎಸ್‌ಐ ಅವಿ ನಾಶ್‌, ಗ್ರಾಮಾಂತರ ಪಿಎಸ್‌ಐ ಮೋಹನ್‌ ಅವರು ಪೊಲೀಸ್‌ ಬಂದೋಬಸ್ತ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next