Advertisement

ಕೈಮಗ್ಗ ಘಟಕ ಸ್ಥಾಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಹಿಳೆಯರು

02:07 PM Apr 21, 2021 | Team Udayavani |

ಚಾಮರಾಜನಗರ: ಜಿಲ್ಲಾಡಳಿತದ ಕಾರ್ಯಯೋಜನೆ ಹಾಗೂ ಲೀಡ್‌ಬ್ಯಾಂಕ್‌ ಆಸಕ್ತಿಯ ಪರಿಶ್ರಮದ ಫ‌ಲವಾಗಿ ಚಾಮರಾಜನಗರ ತಾಲೂಕಿನ ಪುಣಜನೂರು ಭಾಗದ ವಿವಿಧ ಗ್ರಾಮಗಳ 110 ಕುಟುಂಬಗಳು ಕೈಮಗ್ಗ ನೇಕಾರಿಕೆ ವೃತ್ತಿ ಬದುಕು ಕಟ್ಟಿಕೊಳ್ಳಲು ಸಫ‌ಲವಾಗಿವೆ.

Advertisement

ಜಿಲ್ಲಾಧಿಕಾರಿ ಡಾ. ಎಂ.ಆರ್‌ ರವಿ ನೀಡಿದ ಉತ್ತೇಜನದಿಂದಾಗಿ ಲೀಡ್‌ಬ್ಯಾಂಕ್‌ ಪುಣಜನೂರು ಭಾಗದ ಕಾಡಂಚಿನ ಗ್ರಾಮಗಳಾದ ದೊಡ್ಡಮೂಡಹಳ್ಳಿ, ಕೋಳಿಪಾಳ್ಯ, ಮೂಕನಪಾಳ್ಯ, ಬೆಜ್ಜಲಪಾಳ್ಯ, ವೀರಯ್ಯನಪುರ, ರಂಗಸಂದ್ರ (ಬೂದಿಪಡಗ)ದ 110 ಕುಟುಂಬಗಳಿಗೆ ನೇಕಾರ ವೃತ್ತಿ ಉದ್ದಿಮೆ ಕೈಗೊಳ್ಳಲು ಬ್ಯಾಂಕ್‌ ಆಫ್ ಬರೋಡದ ಮೂಲಕ ಸಾಲಸೌಲಭ್ಯ ಒದಗಿಸಿದೆ.

ಸಾಲ ಸೌಲಭ್ಯ ಪಡೆದ ಕುಟುಂಬಗಳು ಜೀವನೋಪಾಯಕ್ಕಾಗಿ ವ್ಯವಸಾಯ ಇತರೆ ಕೂಲಿಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಬದುಕಿನಲ್ಲಿ ಆದಾಯ ಹೆಚ್ಚಳ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂಬ ಆಕಾಂಕ್ಷೆ ಹೊಂದಿದ್ದ ಎಲ್ಲ ಕುಟುಂಬಗಳು ನೇಕಾರ ವೃತ್ತಿ ಉದ್ದಿಮೆಗೆ ಆಸಕ್ತಿತೋರಿಸಿದ್ದರು.

ಆಗ ನೆರವಿಗೆ ಬಂದಿದ್ದುಜಿಲ್ಲಾಡಳಿತ ಹಾಗೂ ಲೀಡ್‌ಬ್ಯಾಂಕ್‌. ವಿಶೇಷವೆಂದರೆ ನೇಕಾರ ಉದ್ದಿಮೆಗೆ ಮುಂದಾದ 110 ಕುಟುಂಬಗಳ ಪೈಕಿ 102ಮಹಿಳೆಯರೇ ಆಗಿದ್ದಾರೆ. 8 ಜನರು ಮಾತ್ರ ಪುರುಷರಾಗಿದ್ದಾರೆ. ಸೌಲಭ್ಯ ಪಡೆದವರಲ್ಲಿ 105ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ನಾಲ್ವರು ಒಬಿಸಿ, ಓರ್ವ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಪ್ರತಿ ಉದ್ದಿಮೆ ಘಟಕ ವೆಚ್ಚಕ್ಕೆ 30,000 ರೂ. ಸಾಲ ನೀಡಲಾಗಿದೆ. ಮಗ್ಗಹಾಗೂ ಪರಿಕರಗಳ ಖರೀದಿಗಾಗಿ ಆರ್ಥಿಕನೆರವನ್ನು ಬಳಸಿಕೊಳ್ಳುತ್ತಿದ್ದಾರೆ.

ನೇಕಾರ ಉದ್ದಿಮೆಗೆ ಸ್ವಯಂ ಪ್ರೇರಿತರಾಗಿಉತ್ಸಾಹ ತೋರಿದ ಪುಣಜನೂರು ಗ್ರಾಮದವ್ಯಾಪ್ತಿಯ ಕಾಡಂಚಿನ ಕುಟುಂಬಗಳಿಗೆವೆಂಕಟಯ್ಯನ ಛತ್ರದ ಬ್ಯಾಂಕ್‌ ಆಫ್ ಬರೋಡಒಟ್ಟು 33,00,000 ರೂ.ಗಳ ಆರ್ಥಿಕಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯಒದಗಿಸುವಲ್ಲಿ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕರಾದ ವಿಜಯ್‌ಕುಮಾರ್‌ ಚೌರಾಸಿರವರ ವಿಶೇಷ ಕಾಳಜಿಯು ಇದೆ. ಚೌರಾಸಿಯ ಅವರು ಖುದ್ದುಗ್ರಾಮಗಳಿಗೆ ಭೇಟಿ ನೀಡಿ ಜನರ ಆಸಕ್ತಿ, ಉತ್ಸಾಹ ಮನಗಂಡು ಹೊಸ ನೇಕಾರ ಉದ್ಯಮ ಬದುಕಿಗೆ ಬೆಂಬಲವಾಗಿದ್ದಾರೆ.ಜಿಲ್ಲಾಡಳಿತ ಹಾಗೂ ಬ್ಯಾಂಕಿನ ನೆರವಿನಿಂದ ನಮ್ಮ ಬದುಕು ಹಸನಾಗುತ್ತಿದೆ.

Advertisement

ಈಗ ಇರುವಕೆಲಸದ ಜೊತೆ ಜೊತೆಯಲ್ಲಿಯೇ ನೇಕಾರ ಉದ್ಯಮವನ್ನು ಕೈಗೊಂಡಿದ್ದೇವೆ. ಪೂಜಾ,ಯೋಗಮ್ಯಾಟ್‌, ಮನೆಗಳಿಗೆ ಬಳಸುವ ಮ್ಯಾಟ್‌ಗಳನ್ನು ತಯಾರು ಮಾಡಿ ಮಾರಾಟಮಾಡುತ್ತಿದ್ದೇವೆ. 2000 ರೂ. ಬಂಡವಾಳ ಹೂಡಿ8000 ರೂ. ಆದಾಯ ಪಡೆಯುತ್ತಿದ್ದೇವೆ ಎಂದುಸೌಲಭ್ಯ ಪಡೆದ ಮಹಿಳೆಯರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next