Advertisement

ಏರ್‌ಪೋರ್ಟ್‌ ಅಧಿಕಾರಿಗಳ ಬಗ್ಗೆ ಮಹಿಳೆಯರು ಗರಂ

11:44 PM Nov 15, 2021 | Team Udayavani |

ದೋಹಾ: ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರ ಕುರಿತಾಗಿ ಇದೀಗ ಮಹಿಳೆಯರು ಧ್ವನಿ ಎತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.

Advertisement

ಕಳೆದ ವರ್ಷ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶುವೊಂದು ಸಿಕ್ಕ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳು ಒಟ್ಟು 10 ಏರ್‌ಲೈನ್‌ಗಳಲ್ಲಿ ಪ್ರಯಾಣಿಸಲು ಹೊರಟಿದ್ದ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಅದರಲ್ಲಿ ವಿದೇಶಿ ಮಹಿಳೆಯರೂ ಇದ್ದಿದ್ದು, ಈ ಘಟನೆಯಿಂದ ಅವರೆಲ್ಲರೂ ಮಾನಸಿಕ ಹಿಂಸೆಗೆ ಒಳಗಾಗಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ:ದಾಂಪತ್ಯಕ್ಕೆ ಕಾಲಿಟ್ಟ ರಾಜ್‌ಕುಮಾರ್‌ ರಾವ್‌-ಪತ್ರಲೇಖಾ

ಈ ಘಟನೆಯ ಬಗ್ಗೆ ಕತಾರ್‌ನ ಪ್ರಧಾನಿ ಕ್ಷಮೆ ಯಾಚಿಸಿ, ಆ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಆ ತಪ್ಪಿಗೆ ಅಧಿಕೃತ ಕ್ಷಮಾಪಣೆ, ಪರಿಹಾರ, ಮಹಿಳೆಯರಿಗೆ ರಕ್ಷಣೆಯ ಗ್ಯಾರಂಟಿ ಬೇಕೆಂದಿರುವ ಏಳು ಮಹಿಳೆಯರು ಇದರ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next