ಪರ್ತ್: ಶನಿವಾರ ನಡೆದ ವನಿತಾ ಟಿ20 ವಿಶ್ವಕಪ್ ಪಂದ್ಯಾ ವಳಿಯ “ಎ’ ವಿಭಾಗದ ಸ್ಪರ್ಧೆಯಲ್ಲಿ ನ್ಯೂಜಿಲ್ಯಾಂಡ್ ತಂಡ 7 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿದೆ.
ಪರ್ತ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 7 ವಿಕೆಟಿಗೆ 127 ರನ್ ಗಳಿಸಿತು. ಜವಾಬಿತ್ತ ನ್ಯೂಜಿಲ್ಯಾಂಡ್ 17.4 ಓವರ್‌ಗಳಲ್ಲಿ 3 ವಿಕೆಟಿಗೆ 131 ರನ್ ಬಾರಿಸಿ ಗೆದ್ದು ಬಂದಿತು.
ನ್ಯೂಜಿಲ್ಯಾಂಡ್ ನಾಯಕಿ, ಆರಂಭಿಕ ಆಟಗಾರ್ತಿಯೂ ಆಗಿ ರುವ ಸೋಫಿ ಡಿವೈನ್ ಅಜೇಯ 75 ರನ್ ಬಾರಿಸಿ ಮಿಂಚಿದರು (55 ಎಸೆತ, 6 ಬೌಂಡರಿ, 2 ಸಿಕ್ಸರ್). ಕಿವೀಸ್ ಬೌಲಿಂಗ್ ದಾಳಿಯಲ್ಲಿ ಮಿಂಚಿದವರೆಂದರೆ ಹ್ಯಾಲಿ ಜೆನ್ಸನ್ (16ಕ್ಕೆ 3) ಮತ್ತು ಅಮೇಲಿಯಾ ಕೆರ್ (21ಕ್ಕೆ 2). ಶ್ರೀಲಂಕಾ ಪರ ನಾಯಕಿ ಚಾಮರಿ ಅತ್ತಪಟ್ಟು 41, ಹರ್ಷಿತಾ ಮಾಧವಿ ಔಟಾಗದೆ 27 ರನ್ ಮಾಡಿದರು.
ಥಾಯ್ಲೆಂಡ್ ಮೇಲೆ ವಿಂಡೀಸ್ ಸವಾರಿ
ಶನಿವಾರದ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಮೇಲೆ ವೆಸ್ಟ್ ಇಂಡೀಸ್ ಸವಾರಿ ಮಾಡಿತು. ಮೊದಲು ಬ್ಯಾಟಿಂಗ್ ನಡೆಸಿದ ಥಾಯ್ಲೆಂಡ್ ಪೂರ್ತಿ 20 ಓವರ್ ಆಡಿ 9 ವಿಕೆಟಿಗೆ 78 ರನ್ ಮಾಡಿತು. ವಿಂಡೀಸ್ 16.4 ಓವರ್‌ಗಳಲ್ಲಿ ಮೂರಕ್ಕೆ 80 ರನ್ ಮಾಡಿ 7 ವಿಕೆಟ್‌ಗಳ ಜಯ ಸಾಧಿಸಿತು.
ವಿಂಡೀಸ್ ನಾಯಕಿ ಸ್ಟಫಾನಿ ಟೇಲರ್ ಆಲ್‌ರೌಂಡ್ ಪ್ರದರ್ಶನ ನೀಡಿ ಮಿಂಚಿದರು. 13ಕ್ಕೆ 3 ವಿಕೆಟ್ ಉರುಳಿಸಿದ ಅವರು, ಬಳಿಕ ಚೇಸಿಂಗ್ ವೇಳೆ 25 ರನ್ ಮಾಡಿ ಅಜೇಯರಾಗಿ ಉಳಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.