ಜೈಪುರ: ವನಿತಾ ಟಿ20 ಚಾಲೆಂಜ್ ಸರಣಿಯ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ವೆಲಾಸಿಟಿ ವಿರುದ್ಧ ಸೂಪರ್ ನೋವಾಸ್ ನಾಲ್ಕು ವಿಕೆಟ್‌ಗಳಿಂದ ಜಯಗಳಿಸಿದೆ.
ವೆಲಾಸಿಟಿ ನೀಡಿದ್ದ 122 ರನ್‌ಗಳ ಗುರಿಯನ್ನು ಆರು ವಿಕೆಟ್ ನಷ್ಟದಲ್ಲಿ ತಲುಪಿ ಕೊನೆಯ ಎಸೆತದಲ್ಲಿ ‘ಸೂಪರ್’ ಗೆಲುವು ದಾಖಲಿಸಿತು.
ಟಾಸ್ ಸೋತ ವೆಲಾಸಿಟಿ 37 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಹೀಲಿ ಮ್ಯಾಥ್ಯೂಸ್ ಹಾಗೂ ಡ್ಯಾನಿಯಲ್ ವ್ಯಾಟ್ ಸೊನ್ನೆ ಸುತ್ತಿದರೆ, ಶಿಫಾಲಿ ವರ್ಮಾ (11), ನಾಯಕಿ ಮಿಥಾಲಿ ರಾಜ್ (12), ವೇದಾ ಕೃಷ್ಣಮೂರ್ತಿ (8) ಅಲ್ಪ ಮೊತ್ತಕ್ಕೆ ಔಟಾದರು. ಈ ಹಂತದಲ್ಲಿ ವಿಕೆಟ್ ಕೀಪರ್ ಸುಷ್ಮಾ ವರ್ಮಾ (ಅಜೇಯ 40 ರನ್, 32 ಎಸೆತ, 3 ಬೌಂಡರಿ ಹಾಗೂ 1 ಸಿಕ್ಸರ್) ಹಾಗೂ ಅಮೆಲಿಯಾ ಕೇರ್ (36 ರನ್, 38 ಎಸೆತ, 4 ಬೌಂಡರಿ) ತಂಡವನ್ನು ಆಧರಿಸಿದರು. ಲಿಯಾ ತಹುಹು 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ ಎರಡು ವಿಕೆಟ್ ಕಿತ್ತರು.
ಸೂಪರ್‌ನೋವಾ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಅರ್ಧಶತಕ ಬಾರಿಸಿದರು (51 ರನ್, 37 ಎಸೆತ, 4 ಬೌಂಡರಿ, 3 ಸಿಕ್ಸರ್). ಪ್ರಿಯಾ ಪೂನಿಯಾ (29), ಜೆಮಿಮಾ ರಾಡ್ರಿಗಸ್ (22) ಉತ್ತಮ ಸಾಥ್ ನೀಡಿದರು.
ಸಂಕ್ಷಿಪ್ತ ಸ್ಕೋರ್: ವೆಲಾಸಿಟಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121 (ಸುಷ್ಮಾ ವರ್ಮಾ ಅ. 40, ಅಮೆಲಿಯಾ ಕೇರ್ 38, ಲಿಯಾ ತಹುಹು 21/2)
ಸೂಪರ್‌ನೋವಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 125 (ಕೌರ್ 51, ರಾಡ್ರಿಗಸ್ 22, ಜಹಾನಾರಾ ಆಲಂ 21/2).