Advertisement

ಶಾಕಿಂಗ್ ಸಮೀಕ್ಷೆ: ಜಗತ್ತಿನ 35%ರಷ್ಟು ಮಹಿಳೆಯರಿಗೆ ಸೈಬರ್ ಹಿಂಸೆ; ಏನಿದು ?

10:08 AM Oct 07, 2020 | Mithun PG |

ನವದೆಹಲಿ: ಜಗತ್ತಿನ 35% ಮಹಿಳೆಯರು ವಿವಿಧ ಮಾದರಿಯ ಸೈಬರ್ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಶಾಕಿಂಗ್ ವರದಿಯೊಂದು ಪ್ರಕಟವಾಗಿದೆ. ಡಿಎನ್ ಎ ಆ್ಯನಲಿಸೀಸ್ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತ 400 ಮಿಲಿಯನ್ ಗಿಂತಲೂ ಹೆಚ್ಚಿನ ಮಹಿಳೆಯರು ಸೈಬರ್ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆಂದು ತಿಳಿದುಬಂದಿದೆ.

Advertisement

ಏತನ್ಮಧ್ಯೆ ಯುನೈಟೈಡ್ ನೇಷನ್ ಕೂಡ ವರದಿ ಪ್ರಕಟಿಸಿದ್ದು, ಜಾಗತಿಕವಾಗಿ 35% ಮಹಿಳೆಯರು ವಿವಿಧ ತೆರೆನಾದ ಸೈಬರ್ ದೌರ್ಜನ್ಯಕ್ಕೆ ಒಳಪಡುತ್ತಿದ್ದು, ಇದರಲ್ಲಿ 60% ಮಹಿಳೆಯರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಹಿಂಸೆ ನೀಡಲಾಗುತ್ತಿದೆ. ಈ ಕಾರಣದಿಂದ ಸುಮಾರು 20% ಮಹಿಳೆಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆಂದು ತಿಳಿಸಿದೆ.

ಭಾರತ ಸೇರಿದಂತೆ ವಿಶ್ವದ 22 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಪ್ರತಿ ರಾಷ್ಟ್ರದಿಂದ 15 ರಿಂದ 25 ವರ್ಷದೊಳಗಿನ 14 ಸಾವಿರಕ್ಕಿಂತ ಹೆಚ್ಚು ಮಹಿಳೆಯರನ್ನೂ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಕೊಲೆ ಆರೋಪಿಯ ಕಾಲಿಗೆ ಪೊಲೀಸರಿಂದ ಫೈರಿಂಗ್

ಇದರಲ್ಲಿ ಶೇ 39% ಮಹಿಳೆಯರಿಗೆ ಫೇಸ್ ಬುಕ್ ಮೂಲಕ ಬೇಡದ ಸಂದೇಶಗಳು, ಕರೆಗಳು ಬರುತ್ತಿದ್ದು, 29% ಮಹಿಳೆಯರಿಗೆ ಇನ್ ಸ್ಟಾಗ್ರಾಂ ಮೂಲಕ ಅನಾವಶ್ಯಕ ತೊಂದರೆಗಳನ್ನು ಅನುಭವಿಸುತ್ತಿದ್ದರು. ಮೆಸೆಂಜಿಂಗ್ ಆ್ಯಪ್ ವಾಟ್ಸಾಪ್ ಮೂಲಕ ಶೇ 14ರಷ್ಟು ಮಹಿಳೆಯರಿಗೆ ಸೈಬರ್ ಹಿಂಸೆಗಳಾಗಿವೆ. ಇನ್ನೂ 10% ಸ್ನ್ಯಾಪ್ ಚಾಟ್, 9% ಟ್ವಿಟ್ಟರ್, 6% ಟಿಕ್ ಟಾಕ್ ನಲ್ಲಿ ಮಹಿಳೆಯರು ಹಿಂಸೆಗೊಳಗಾಗುತ್ತಿದ್ದಾರೆ.

Advertisement

ಭಾರತದಲ್ಲಿ ದೆಹಲಿ ಮತ್ತು ಇತರ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದರಿಂದ ಇಂಟರ್ ನೆಟ್ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಶೇ 36% ಹೆಚ್ಚಾಗುತ್ತಿದೆಯೆಂದು ತಿಳಿದುಬಂದಿದೆ. ಗಮನಾರ್ಹ ಸಂಗತಿಯೆಂದರೇ ಇಂಟರ್ ನೆಟ್ ಮೂಲಕ ಮಹಿಳೆಯರಿಗೆ ಹಿಂಸೆ ನೀಡುವ ಶೇ. 100 ಪುರುಷರಲ್ಲಿ 25% ಮಾತ್ರ ಶಿಕ್ಷೆಗೊಳಗಾಗುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ:  ಹತ್ರಾಸ್ ಸಂತ್ರಸ್ಥೆ ಮತ್ತು ಆರೋಪಿ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು: ಉ.ಪ್ರ ಪೊಲೀಸರು

 

Advertisement

Udayavani is now on Telegram. Click here to join our channel and stay updated with the latest news.

Next