Advertisement
ಸುಮಾರು 20 ವರ್ಷ ವಯಸ್ಸಿನ 17 ಸಾವಿರ ಮಂದಿ ಮೇಲೆ 2 ವಾರಗಳ ಕಾಲ ಈ ಸಂಶೋಧನೆ ನಡೆಸಲಾಗಿದ್ದು ಅಚ್ಚರಿಯ ವಿಚಾರ ಹೊರಬಿದ್ದಿದೆ.ಸಂಶೋಧನೆ ಪ್ರಕಾರ, ಯುರೋಪ್ ಮತ್ತು ಉತ್ತರ ಅಮೆರಿಕದ ಯವಕರು ದೀರ್ಘಾವಧಿ ನಿದ್ದೆ ಮಾಡ್ತಾರಂತೆ. ಹಾಗೆಯೇ ಏಷ್ಯನ್ನರು ಅತಿ ಕಡಿಮೆ ನಿದ್ದೆ ಮಾಡ್ತಾರಂತೆ. ಮಧ್ಯಪ್ರಾಚ್ಯದವರು ನಿಗದಿತ ಅವಧಿಯಷ್ಟೇ ನಿದ್ದೆ ಮಾಡ್ತಾರಂತೆ.
ಹೆಲ್ಸೆಂಕಿ ವಿವಿಯ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, ಹೀಗೆ ಹೆಚ್ಚು ನಿದ್ದೆ ಮಾಡುವ ಗುಣಕ್ಕೆ ಪ್ರದೇಶವಾರು ಕಾರಣ ಎನ್ನುವುದು ಸ್ವಲ್ಪವಷ್ಟೇ ಇದೆ. ಆದರೆ ನಿದ್ದೆ ಮಾಡುವ ಹೊತ್ತಿನಲ್ಲಿರುವ ವ್ಯತ್ಯಾಸ ಹೆಚ್ಚು ನಿದ್ದೆಗೆ ಕಾರಣವಿರಬಹುದುಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಂಶೋಧನೆಯ ಅಂಶಗಳನ್ನು ಸ್ಲೀಪ್ ಮೆಡಿಸಿನ್ ಹೆಸರಿನ ನಿಯತಕಾಲಿಕೆಯಲ್ಲಿ ನೀಡಲಾಗಿದೆ.