Advertisement

ಮಹಿಳೆಯರು ಸಬಲರಾಗಿ ಬೆಳೆಯಬೇಕು: ಸಚಿವೆ ಶಶಿಕಲಾ ಜೊಲ್ಲೆ

02:28 PM Jan 15, 2020 | Suhan S |

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಹರಿಹರದಲ್ಲಿ ನಡೆಯುತ್ತಿರುವ ಹರಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ವಿಕಲ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವ ಇಲಾಖೆ ನಮ್ಮದು. ಇಂದಿನ ಆಧುನಿಕ, ಫ್ಯಾಷನ್, ಕಂಪ್ಯೂಟರ್, ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಭಾರತೀಯ ಸಂಸ್ಕೃತಿಯ ಮರೆತು ಪಾಶ್ಚಾತ್ಯ ಸಂಸ್ಕೃತಿಯ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅದೇ ಪಾಶ್ಚಾತ್ಯ ಮಹಿಳೆಯರು ಭಾರತೀಯ ಸಂಸ್ಕೃತಿಯ ಅನುಸರಣೆ ಮಾಡುವುದು ಕಂಡು ಬರುತ್ತದೆ. ಮಹಿಳೆಯರು ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ವೇದಿಕೆಯಲ್ಲಿ ಮಾತಾನಾಡಿದ ನಟಿ ರಾಗಿಣಿ ದ್ವಿವೇದಿ ಮಹಿಳೆಯರು ಮನೆ, ಹೊರಗಡೆ ಸಾವಿರಾರು ಕೆಲಸ ಮಾಡಿದರೂ ದೊರೆಯಬೇಕಾದ ಗೌರವ, ಸಮ್ಮಾನ ದೊರೆಯುತ್ತಿಲ್ಲ. ಅಡುಗೆ, ಮನೆಯ ಕೆಲಸ ಮಾಡುವುದು ಒಂದು ಕೆಲಸವೇ ಎಂದು ಮೂದಲಿಸುವುದು ಕಂಡುಬರುತ್ತದೆ ಎಂದರು.

ಪ್ರತಿಯೊಬ್ಬ ಹೆಣ್ಣು ಮಾಡುವ ಕೆಲಸ ಇನ್ಯಾರು ಮಾಡಲು ಸಾಧ್ಯವಿಲ್ಲ. ಮಹಿಳೆಯರು ಕೆಲಸ ಮಾಡದೇ ಇದ್ದರೆ ಜೀವನ ಸಾಗುವುದೇ ಇಲ್ಲ.  ಮಹಿಳೆಯರು ಮಾಡುವ ಕೆಲಸಕ್ಕೆ ಗೌರವ, ಸಮ್ಮಾನ ನೀಡುವಂತಾಗಬೇಕು. ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಎಲ್ಲೆಡೆ ಶಾಂತಿ, ಏಕಾಗ್ರತೆ, ಪ್ರೀತಿ, ವಿಶ್ವಾಸ ಪಸರಿಸಬೇಕು.  ಇಂದಿನ ಹರ ಜಾತ್ರಾ ಮಹೋತ್ಸವ ನಿಜಕ್ಕೂ ಸಂತೋಷದ ವಿಚಾರ. ಎಷ್ಟೇ ಒತ್ತಡವಿದ್ದರೂ ಒಬ್ಬರನ್ನೊಬ್ಬರು ಭೇಟಿಮಾಡಿ, ವಿಚಾರ ವಿನಿಮಯ ಮಾಡಿಕೊಳ್ಳಲು ಮನವಿ  ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next