ಯಾದಗಿರಿ: ರಾಜ್ಯ ಚುನಾವಣಾ ಆಯೋಗಜಿಪಂ ಮತ್ತು ತಾಪಂಗಳಿಗೆ ವರ್ಗವಾರುಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ.ಜಿಪಂನಲ್ಲಿ ಪುರುಷ ಮತ್ತು ಮಹಿಳೆಗೆ ಶೇ.50ಮೀಸಲಾತಿ ನಿಗದಿಯಾಗಿದೆ. ಆದರೆ, ತಾಪಂಸ್ಥಾನಗಳಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನನೀಡಲಾಗಿದ್ದು, ಪುರುಷರಿಗೆ ಆದ್ಯತೆ ನೀಡಿಲ್ಲಎನ್ನುವ ಅಸಮಾಧಾನದ ಮಾತುಗಳು ಕೇಳಿಬಂದಿದೆ.
ಗುರುಮಠಕಲ್ ತಾಪಂನ 10 ಸ್ಥಾನಗಳಲ್ಲಿಅನುಸೂಚಿತ ಜಾತಿ ಮತ್ತು ಪಂಗಡಿಗಳಿಗೆಮೀಸಲಿರಿಸಿದ ಸ್ಥಾನಗಳಲ್ಲಿ ಪುರುಷರಿಗೆ ಆದ್ಯತೆನೀಡಲಾಗಿಲ್ಲ. ಒಟ್ಟು ಸ್ಥಾನಗಳಲ್ಲಿ ಸಮಾನಸ್ಥಾನಗಳನ್ನು ಮಹಿಳೆ-ಪುರುಷರಿಗೆ ತಲಾ 5 ಸ್ಥಾನಮೀಸಲಿರಿಸಲಾಗಿದೆ.
ಆದರೆ, ಅನುಸೂಚಿತಜಾತಿಗೆ ಮೀಸಲಿರುವ 3 ಸ್ಥಾನಗಳಲ್ಲಿ 2ಮಹಿಳೆ, ಅನುಸೂಚಿತ ಪಂಗಡ 1 ಸ್ಥಾನಕ್ಕೆಮಹಿಳೆ, ಹಿಂದುಳಿದ ವರ್ಗ “ಅ’ಕ್ಕೆ 1 ಸ್ಥಾನಮಹಿಳೆಗೆ ಮೀಸಲಿರಿಸಲಾಗಿದೆ. 5 ಸಾಮಾನ್ಯಸ್ಥಾನಗಳಲ್ಲಿ ಪುರುಷರಿಗೆ 4, 1 ಸ್ಥಾನ ಮಹಿಳೆಗೆಮೀಸಲಿರಿಸಲಾಗಿದೆ. ಹೀಗಾಗಿ ಅನುಸೂಚಿತಜಾತಿ ಮತ್ತು ಪಂಗಡದ ಸ್ಥಾನಗಳಿಗೆ ಪುರುಷರಿಗೆಆದ್ಯತೆ ನೀಡಬೇಕಿತ್ತು ಎನ್ನುವ ಮಾತುಗಳುಚರ್ಚೆಗೆ ಎಡೆ ಮಾಡಿಕೊಟ್ಟಿವೆ.
ಇನ್ನು ವಡಗೇರಾ ತಾಪಂನ ಅನುಸೂಚಿತಜಾತಿ 2 ಸ್ಥಾನದಲ್ಲಿ 1 ಸ್ಥಾನ ಮಹಿಳೆಗೆ ಮೀಸಲಿದ್ದುಅನುಸೂಚಿತ ಪಂಗಡ 1 ಸ್ಥಾನ ಮಹಿಳೆ, ಬಿಸಿಎ1ಸ್ಥಾನಕ್ಕೆ ಮಹಿಳೆ ಹಾಗೂ 5 ಸಾಮಾನ್ಯ ಸ್ಥಾನಗಳಲ್ಲಿ2 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿದೆ.ಹಾಗೆಯೇ ಸುರಪುರದಲ್ಲೂ ಅನುಸೂಚಿತಜಾತಿ 3 ಸ್ಥಾನಗಳಲ್ಲಿ ಮಹಿಳೆಯರಿಗೆ 2,ಅನುಸೂಚಿತ ಪಂಗಡ 3 ಸ್ಥಾನಗಳಲ್ಲಿ 2 ಸ್ಥಾನಮಹಿಳೆಯರಿಗೆ ಬಿಸಿಎಗೆ ಕ್ಷೇತ್ರ ಮೀಸಲಾಗಿಲ್ಲ.
ಸಾಮಾನ್ಯ 7 ಸ್ಥಾನಗಳಲ್ಲಿ 3 ಮಹಿಳೆಯರಿಗೆಮೀಸಲಿರಿಸಲಾಗಿದೆ.ಯಾದಗಿರಿ ಜಿಪಂನ 30 ಸ್ಥಾನಗಳಲ್ಲಿ 15ಸ್ಥಾನಗಳು ವಿವಿಧ ವರ್ಗಕ್ಕೆ ಮೀಸಲಿದ್ದು, ಉಳಿದ15 ಸ್ಥಾನಗಳು ಸಾಮಾನ್ಯ ವರ್ಗಕ್ಕೆ. ಇದರಲ್ಲಿ7 ಸ್ಥಾನಗಳು ಮಹಿಳೆ, 8 ಸ್ಥಾನ ಪುರುಷರಿಗೆಮೀಸಲಾಗಿದೆ. ಅನುಸೂಚಿತ ಜಾತಿಗೆ 8ಸ್ಥಾನಗಳಲ್ಲಿ 4 ಮಹಿಳೆಯರು, ಅನುಸೂಚಿತಪಂಗಡದ 4 ಸ್ಥಾನಗಳಲ್ಲಿ 2 ಮಹಿಳೆ ಹಾಗೂಹಿಂದುಳಿದ ವರ್ಗ “ಅ’ಕ್ಕೆ 2 ಸ್ಥಾನಗಳು ಮಹಿಳೆ,ಹಿಂದುಳಿದ “ಬ’ ವರ್ಗಕ್ಕೆ 1 ಸ್ಥಾನ ಪುರುಷಗೆಮೀಸಲಿರಿಸಲಾಗಿದೆ.ಇನ್ನು ಜಿಲ್ಲೆಯ 6 ತಾಲೂಕುಪಂಚಾಯಿತಿಗಳಿದ್ದು, ಯಾದಗಿರಿ ತಾಪಂಗೆ 15ಸ್ಥಾನದಲ್ಲಿ 8 ಮಹಿಳೆ, ಶಹಾಪುರ ತಾಪಂ 16ಸ್ಥಾನಗಳಲ್ಲಿ 8 ಮಹಿಳೆ, ವಡಗೇರಾ ತಾಪಂ 9ಸ್ಥಾನಗಳಲ್ಲಿ 5 ಮಹಿಳೆ, ಸುರಪುರ 13 ಸ್ಥಾನಗಳಲ್ಲಿ7 ಮಹಿಳೆ, ಹುಣಸಗಿ ತಾಪಂ 12 ಸ್ಥಾನಗಳಲ್ಲಿ 6ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಅನಿಲ ಬಸೂದೆ