Advertisement

ಹೊಸದಿಲ್ಲಿ: ವಿದ್ಯುತ್ಛಕ್ತಿ ಚಾಲಿತ ದ್ವಿಚಕ್ರ ವಾಹನ ತಯಾರಕ ಓಲಾ ಕಂಪೆನಿಯ ತಮಿಳುನಾಡಿನ ಉತ್ಪಾದನ ಘಟಕವನ್ನು ಸಂಪೂರ್ಣ ಮಹಿಳಾ ಉದ್ಯೋಗಿಗಳೇ ಮುನ್ನಡೆಸಲಿದ್ದಾರೆ ಎಂದು ಕಂಪೆನಿಯ ಚೇರ್ಮನ್‌ ಮತ್ತು ಗ್ರೂಪ್‌ ಸಿಇಒ ಭವಿಷ್‌ ಅಗರ್‌ವಾಲ್‌ ಸೋಮವಾರ ಘೋಷಿಸಿದ್ದಾರೆ.

Advertisement

ಮಹಿಳಾ ಉದ್ಯೋಗಿಗಳು ಮಾತ್ರ ಇರುವ ಜಗತ್ತಿನ ಏಕಮಾತ್ರ ಘಟಕ ಇದಾಗಿರಲಿದ್ದು, “ಆತ್ಮ ನಿರ್ಭರ ಭಾರತವಾಗಲು ಸ್ತ್ರೀಯರು ಆತ್ಮನಿರ್ಭರರಾಗುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ. ಸುಮಾರು

500 ಎಕರೆಗಳಷ್ಟು ವಿಸ್ತಾರವಾಗಿರುವ ಉತ್ಪಾದನ ಘಟಕವು ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಿದಾಗ 10 ಸಾವಿರಕ್ಕೂ ಅಧಿಕ ಮಹಿಳಾ ಉದ್ಯೋಗಿಗಳನ್ನು ಹೊಂದಿರಲಿದೆ ಎಂದು ಅವರು ತಿಳಿಸಿದ್ದಾರೆ. ಈ ಉತ್ಪಾದನ ಘಟಕ ಆರಂಭಿಸಲು 2,400 ಕೋ.ರೂ. ಬಂಡವಾಳ ಹೂಡುವುದಾಗಿ ಓಲಾ ಕಳೆದ ವರ್ಷ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next