Advertisement
ಎಲ್ಲಾ ರಂಗದಲ್ಲೂ ಮಹಿಳೆಯರಿದ್ದಾರೆ: ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಪುರುಷರಷ್ಟೇ ಸರಿಸಮಾನವಾಗಿ ಬೆಳೆಯುತ್ತಿದ್ದು ಆಟೋ ಚಾಲಕರಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನ, ರಾಜಕೀಯ, ಸೇನೆ, ಖಗೋಳಶಾಸ್ತ್ರ, ವಿಜ್ಞಾನ, ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಅವರು ಸರಿಸಮಾನವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಸಮಾನವಾಗಿ ಜೀವನ ನಡೆಸಿ: ಹಿಂದೆ ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ನಾಣ್ಣುಡಿ ಇತ್ತು ಅದೇ ರೀತಿ ಒಬ್ಬ ಯಶಸ್ವಿ ಮಹಿಳೆ ಜೊತೆಯಲ್ಲಿ ಒಬ್ಬ ಪುರುಷನೂ ಇರುತ್ತಾನೆ ಎಂದನ್ನು ಹೇಳಬಹುದು. ಈ ಎರಡೂ ವಾಕ್ಯಗಳು ಒಂದೇ ಚಿಂತನೆಯಲ್ಲಿ ಗಂಡು-ಹೆಣ್ಣು ಭೇದಭಾವವಿಲ್ಲದೆ ಸಮಾನವಾಗಿ ಸಂತೋಷವಾಗಿ ಜೀವನ ನಡೆಸಬೇಕಾಗಿದೆ ಎಂದರು. ಜೀವನದಲ್ಲಿ ಗುರಿ ಇರಲಿ: ಹಿಂದೆ ನಮ್ಮ ಪೂರ್ವಜರು ಸ್ವರ್ಗ ಮತ್ತು ನರಕಗಳು ಆಕಾಶದಲ್ಲಿರುತ್ತದೆ ಎಂದು ಹೇಳುತ್ತಿದ್ದರು ಆದರೆ ನಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಂದ ಅವುಗಳು ನಿರ್ಧಾರವಾಗುತ್ತದೆ. ನಾವು ಮಾಡಿದ ಒಳ್ಳೆಯ ಕೆಲಸ ಕೆಟ್ಟ ಕೆಲಸಗಳ ಮೇಲೆ ನಾವು ಸ್ವರ್ಗ-ನರಕಕ್ಕೆ ಹೋಗುವುದು ನಿರ್ಧಾರವಾಗುತ್ತದೆ. ಆದ್ದರಿಂದ ಬದುಕಿನಲ್ಲಿ ಒಂದು ಗುರಿಯನ್ನಿಟ್ಟುಕೊಂಡು ಶ್ರಮದಿಂದ ಬದುಕಿನಲ್ಲಿ ಮೇಲೆ ಬರುವ ಪ್ರಯತ್ನಮಾಡಿ ಎಂದು ಸಲಹೆ ನೀಡಿದರು.
Related Articles
Advertisement
ಉಳಿತಾಯದ ವಿಷಯದಲ್ಲಿ ಮಹಿಳೆಯರು ಸಮರ್ಥರು: ಮೊದಲಿನಿಂದಲೂ ಮಹಿಳೆಯರು ಉಳಿತಾಯದ ವಿಷಯದಲ್ಲಿ ಸಮರ್ಥರು. ಮನೆಯಲ್ಲಿ ಗಂಡ ಅಥವಾ ಹಿರಿಯರು ಕೊಟ್ಟ ಹಣವನ್ನು ದುಂದುವೆಚ್ಚ ಮಾಡದೇ ಸಾಸಿವೆ ಡಬ್ಬಿಗಳಲ್ಲಿ ತವರುಮನೆಯ ಸೀರೆಗಳಲ್ಲಿ ಮುಚ್ಚಿಟ್ಟು ಕಷ್ಟಕ್ಕೆ ನೀಡುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಲ್ಲಿ ಹೂಡುವ ಮೂಲಕ ಆರ್ಥಿಕ ವಹಿವಾಟು ನಡೆಸುತ್ತಿದ್ದಾರೆ. ಅವರಲ್ಲಿಯೂ ಸ್ವಾವಲಂಬಿಯಾಗಬೇಕು, ಸಾಧಿಸಬೇಕು, ಸಂಪಾದಿಸಬೇಕೆಂಬ ಸಕಾರಾತ್ಮಕ ಮನೋಭಾವನೆ ಹೆಚ್ಚುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಮಹಿಳೆಯರು ಮನೆಗಳಲ್ಲಿ ಟೀವಿಗಳಲ್ಲಿ ಬರುವ ಸೀರಿಯಲ್, ಸಿನಿಮಾ ಮುಂತಾದವನ್ನು ನೋಡುವ ಬದಲಿಗೆ ಅಕ್ಕ ಮಹಾದೇವಿಯವರ ವಚನಗಳನ್ನು ಓದುವ ಮೂಲಕ ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಿಮ್ಮ ಭವಿ ಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಸೂಕ್ತ ಮಾರುಕಟ್ಟೆ ವ್ಯವಸ್ಥೆ: ಮಹಿಳಾ ಸಂಘಗಳಿಗೆ ತರಬೇತಿ, ಆರ್ಥಿಕ ಸಹಾಯ, ಉತ್ಪನ್ನಗಳಿಗೆ ಮಾರುಕಟ್ಟೆ ಸೇರಿದಂತೆ ಎಲ್ಲಾ ರೀತಿಯ ಸಹಾಯ ಮಾಡಲು ನಮ್ಮ ಇಲಾಖೆ ಬದ್ಧವಾಗಿದೆ. ಸಹಕಾರಿ ಇಲಾಖೆಯಿಂದ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮಹಿಳಾ ಸಹಕಾರಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಆದ್ದರಿಂದ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಯಾರೂ ಚಿಂತಿಸಬೇಕಿಲ್ಲ ಎಂದು ಭರವಸೆ ನೀಡಿದರು.
ಸಕಾಲಕ್ಕೆ ಸಾಲ ಮರುಪಾವತಿಸಿ: ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮಹಿಳೆಯರು ಸ್ವಾವಲಂಬಿಯಾಗಲು ಬೇಕಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಸಹಕಾರಿ ಸಂಘದಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
15 ಕೋಟಿ ರೂ. ವಹಿವಾಟು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಹೆಚ್ಚು ಮಹಿಳೆಯರು ಇದ್ದಲ್ಲಿ ಅಂಥ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಗೌರಿಬಿದನೂರಿನಲ್ಲಿ 10 ವರ್ಷಗಳ ಹಿಂದೆ ಪ್ರಾರಂಭವಾದ ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಸಂಘ 211 ಸದಸ್ಯರೊಂದಿಗೆ 2-11 ಲಕ್ಷ ರೂ.ಗಳಲ್ಲಿ ಪ್ರಾರಂಭವಾಗಿ ಇಂದು 540 ಸದಸ್ಯರ ಮೂಲಕ 15 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವಂಥ ಸಂಸ್ಥೆಯಾಗಿ ಬೆಳೆದಿರುವುದು ಸಂತೋಷದ ವಿಷಯವಾಗಿದೆ ಎಂದರು.
ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿ ರೆಡ್ಡಿ ಮಾತನಾಡಿ, ಸಮೃದ್ಧಿ ಮಹಿಳಾ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷೆ ಗಂಗಲಕ್ಷ್ಮಮ್ಮ ಮೂವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು ನೂರಾರು ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯ ಮಾಡಿದ್ದಾರೆ ಮತ್ತು ಸಾಧನೆಯಿಂದ ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದು, ಸಂಸ್ಥೆಯೂ ಬೆಳೆದಿದೆ ಅವರ ಸೇವೆಗೆ ಗೌರವಗಳು ಸಂದಿವೆ ಇನ್ನೂ ಹೆಚ್ಚು ಉತ್ತಮವಾಗಿ ಅವರು ಬೆಳೆಯಲಿ ಎಂದು ಹರಸಿದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ನಾಗೇಂದ್ರ ಗುಪ್ತ, ನಿವೃತ್ತ ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯಸ್ಥಾಪಕ ಬಸವರಾಜು, ಹಾಲನಹಳ್ಳಿ ಗ್ರಾಪಂ ಅಧ್ಯಕ್ಷ ವರಲಕ್ಷ್ಮೀ, ಸದಸ್ಯರಾದ ವಿಮಲಾಕ್ಷಿ, ವಿಜಯಲಕ್ಷೀ ಹಾಗೂ ನಗರಸಭೆಯ ಮಹಿಳಾ ಸದಸ್ಯರು, ಉಪಾಧ್ಯಕ್ಷೆ ರಾಜೇಶ್ವರಿ, ಜಿಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ನಾಗರಾಜ್, ಜಿ.ಕೆ.ಸತೀಶ್ ಕುಮಾರ್, ಸಾದರ ಕ್ಷೇಮಾಭಿವೃದ್ಧಿ ಸಂಘದ ರವಿಕುಮಾರ್, ಗೋವಿಂದರಾಜು, ಸಂಧ್ಯಾ ಇತರರು ಇದ್ದರು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಸನ್ಮಾನಿಸಲಾಯಿತು.
ತೆರಿಗೆ ಸಮಸ್ಯೆ ಪರಿಹರಿಸಲು ಮನವಿ: ಸಹಕಾರಿ ಸಂಘಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಆಗುತ್ತಿರುವ ತೊಂದರೆ ಪರಿಹರಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವರ ಬಳಿಗೆ ಶಶಿಕಲಾ ಜೊಲ್ಲೆ ಹಾಗೂ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದಲ್ಲಿ ಸಹಕಾರಿ ನಿಯೋಗವು ತೆರಳಿ ಮನವಿ ನೀಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ಮತ್ತೂಮ್ಮೆ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ಹೇಳಿದರು.