Advertisement

ವನಿತಾ ಏಕದಿನ ವಿಶ್ವಕಪ್‌ -2022: ಭಾರತದ ಮೊದಲ ಎದುರಾಳಿ ಪಾಕಿಸ್ಥಾನ

10:49 PM Dec 15, 2021 | Team Udayavani |

ದುಬಾೖ: ನ್ಯೂಜಿಲ್ಯಾಂಡ್‌ ಆತಿಥ್ಯದಲ್ಲಿ 2022ರ ಮಾರ್ಚ್‌ 4ರಂದು ಆರಂಭವಾಗಲಿರುವ ಐಸಿಸಿ ಏಕದಿನ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ.

Advertisement

ಭಾರತ ಮಾ. 6ರಂದು ಬದ್ಧ ಎದುರಾಳಿ ಪಾಕಿಸ್ಥಾನವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

ಮಾ. 4ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್‌-ವೆಸ್ಟ್‌ ಇಂಡೀಸ್‌ ಮುಖಾಮುಖಿ ಆಗಲಿವೆ. ದ್ವಿತೀಯ ದಿನ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ 6 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಎದುರಾಗುತ್ತವೆ.

8 ತಂಡ, 31 ಪಂದ್ಯ
8 ತಂಡಗಳ ನಡುವೆ 31 ದಿನಗಳ ಕಾಲ ನಡೆ ಯುವ ಈ ಕೂಟದಲ್ಲಿ ಒಟ್ಟು 31 ಪಂದ್ಯಗಳನ್ನು ಆಡಲಾಗುವುದು. 6 ತಾಣಗಳೆಂದರೆ ಆಕ್ಲೆಂಡ್‌, ಕ್ರೈಸ್ಟ್‌ಚರ್ಚ್‌, ಡ್ಯುನೆಡಿನ್‌, ಹ್ಯಾಮಿಲ್ಟನ್‌, ಟೌರಂಗಾ ಮತ್ತು ವೆಲ್ಲಿಂಗ್ಟನ್‌.

2017-2020ರ ಐಸಿಸಿ ವನಿತಾ ಚಾಂಪಿಯನ್‌ಶಿಪ್‌ ಸಾಧನೆಯಂತೆ ಆಸ್ಟ್ರೇಲಿಯ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಭಾರತ ಈ ಕೂಟಕ್ಕೆ ನೇರ ಅರ್ಹತೆ ಪಡೆದಿವೆ. ನ್ಯೂಜಿಲ್ಯಾಂಡ್‌ ಆತಿಥೇಯ ರಾಷ್ಟ್ರ ವಾಗಿದೆ. ಉಳಿದಂತೆ, ಕೋವಿಡ್‌ ನಿಂದಾಗಿ ಅರ್ಹತಾ ಪಂದ್ಯಾವಳಿ ರದ್ದುಗೊಂಡ ಕಾರಣ ತಂಡಗಳ ರ್‍ಯಾಂಕಿಂಗ್‌ ಮಾನದಂಡದಂತೆ ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳಿಗೆ ಅವಕಾಶ ಲಭಿಸಿದೆ.

Advertisement

ಇದನ್ನೂ ಓದಿ:ಡಬಲ್‌ ಎಂಜಿನ್‌ ಸರ್ಕಾರ ಪರಿಹಾರ ಕೊಡಿಸಲಿ: ಬಂಡೆಪ್ಪ ಕಾಶಂಪೂರ್‌

ರೌಂಡ್‌ ರಾಬಿನ್‌ ಲೀಗ್‌
ಪಂದ್ಯಾವಳಿ ರೌಂಡ್‌ ರಾಬಿನ್‌ ಲೀಗ್‌ ಮಾದರಿ ಯಲ್ಲಿ ನಡೆಯಲಿದೆ. ಇದರಂತೆ ಪ್ರತಿಯೊಂದು ತಂಡ ಉಳಿದೆಲ್ಲ ತಂಡಗಳನ್ನು ಎದುರಿಸಲಿದೆ. ಆಗ ಲೀಗ್‌ನಲ್ಲಿ ಪ್ರತಿಯೊಂದು ತಂಡಕ್ಕೆ 7 ಪಂದ್ಯ ಆಡಲು ಸಿಗುತ್ತದೆ.

ಲೀಗ್‌ನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮಿಫೈನಲ್‌ ಪಂದ್ಯಗಳು ವೆಲ್ಲಿಂಗ್ಟನ್‌ (ಮಾ. 30) ಮತ್ತು ಕ್ರೈಸ್ಟ್‌ ಚರ್ಚ್‌ನಲ್ಲಿ (ಮಾ. 31) ನಡೆಯಲಿವೆ. ಎ. 3ರ ಫೈನಲ್‌ ಆತಿಥ್ಯವೂ ಕ್ರೈಸ್ಟ್‌ಚರ್ಚ್‌ಗೆ ಒಲಿದಿದೆ. ವಿಶ್ವಕಪ್‌  ಮುನ್ನ ಭಾರತ ವನಿತಾ ತಂಡ ನ್ಯೂಜಿಲ್ಯಾಂಡ್‌ನ‌ಲ್ಲಿ ಸರಣಿಯೊಂದನ್ನು ಆಡಲಿದೆ.

ಭಾರತದ‌ ವಿಶ್ವಕಪ್‌ ಪಂದ್ಯಗಳು
ದಿನಾಂಕ ಎದುರಾಳಿ
ಮಾ. 6 ಪಾಕಿಸ್ಥಾನ
ಮಾ. 10 ನ್ಯೂಜಿಲ್ಯಾಂಡ್‌
ಮಾ. 12 ವೆಸ್ಟ್‌ ಇಂಡೀಸ್‌
ಮಾ. 16 ಇಂಗ್ಲೆಂಡ್‌
ಮಾ. 19 ಆಸ್ಟ್ರೇಲಿಯ
ಮಾ. 22 ಬಾಂಗ್ಲಾದೇಶ
ಮಾ. 27 ದಕ್ಷಿಣ ಆಫ್ರಿಕಾ

Advertisement

Udayavani is now on Telegram. Click here to join our channel and stay updated with the latest news.

Next