Advertisement
ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಈ ಕೊಲೆಗೆ ಸಂಬಂಧಿಸಿ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜತೆಗೆ ಈ ಕೊಲೆಯನ್ನು ಪೊಲೀಸರು ಕೂಡ ಅತ್ಯಂತ ಗಂಭೀರ ಹಾಗೂ ಮಹತ್ವದ ಪ್ರಕರಣವಾಗಿ ಪರಿಗಣಿಸಿದ್ದು, ಕೊಲೆ ಯನ್ನು ಭೇದಿಸುವಲ್ಲಿ ಸಾಕಷ್ಟು ತಾಂತ್ರಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ.
Related Articles
Advertisement
ಸಾಮಾನ್ಯವಾಗಿ ಯಾವುದೇ ಒಂದು ಕೊಲೆ ಪ್ರಕರಣ ನಡೆದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಆದರೆ ಶ್ರೀಮತಿ ಶೆಟ್ಟಿ ಕೊಲೆಯು ವಿಚಿತ್ರ ಸ್ವರೂಪದ ಕೊಲೆಯಾಗಿದ್ದು, ತಲೆಯ ಭಾಗ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದರೆ, ದೇಹದ ಒಂದು ಭಾಗವು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಆದರೆ ಒಂದೇ ಠಾಣೆಯ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ಉದ್ದೇಶದಿಂದ ಈ ಪ್ರಕರಣವನ್ನು ಕದ್ರಿಯಿಂದ ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸುವುದು ಉತ್ತಮ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇನ್ನು ಕೂಡ ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರಿಗೇ ದಿಗ್ಭ್ರಮೆಶ್ರೀಮತಿ ಶೆಟ್ಟಿ ಕೊಲೆಯು ಕೇವಲ ಜಿಲ್ಲೆಯ ಜನರನ್ನಷ್ಟೇ ಅಲ್ಲ ಇಡೀ ಪೊಲೀಸ್ ಇಲಾಖೆಯನ್ನೇ ದಿಗ್ಭ್ರಮೆಗೀಡು ಮಾಡಿದೆ. ಏಕೆಂದರೆ, ಹಲವು ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ತಮ್ಮ ಸೇವಾವಧಿಯಲ್ಲೇ ಈ ರೀತಿಯ ಪೈಶಾಚಿಕವಾದ ಕ್ರೂರತೆಯ ಕೊಲೆಯಾಗಿರುವುದನ್ನು ನೋಡಿಯೇ ಇಲ್ಲ ಎನ್ನುವ ಅಭಿಪ್ರಾಯ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಕ್ರೂರ ರೀತಿಯಲ್ಲಿ ಮಹಿಳೆಯೊಬ್ಬರನ್ನು ರುಂಡ-ಮುಂಡ ಪ್ರತ್ಯೇಕಿಸಿ, ಆ ದೇಹವನ್ನು ನಗರದೆಲ್ಲೆಡೆ ಸ್ಕೂಟರ್‌ನಲ್ಲಿ ಇಟ್ಟುಕೊಂಡು ಸುತ್ತಾಡಿ ವಿಕೃತಿ ಮೆರೆದಿರುವ ಈ ಕೊಲೆ ಪಾತಕಿಗಳನ್ನು ಆದಷ್ಟು ಬೇಗ ಬಂಧಿಸಿ ಹೆಡೆಮುರಿ ಕಟ್ಟಬೇಕೆಂಬ ಹಠದಲ್ಲಿ ಪೊಲೀಸರು ಇದ್ದಾರೆ ಎನ್ನಲಾಗಿದೆ. ಸಾರ್ವಜನಿಕವಾಗಿಯೂ ಚರ್ಚೆ
ಈ ನಡುವೆ ಏನೇ ಕಾರಣಗಳಿದ್ದರು ಕೂಡ ಮಹಿಳೆಯನ್ನು ಈ ರೀತಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ ಅನಂತರ ಅದನ್ನು ಪ್ರತೀಕಾರ ತೀರಿಸುವ ರೀತಿಯಲ್ಲಿ ಅಟ್ಟಹಾಸ ತೋರಿಸಿರುವ ಆ ಕೊಲೆಗಡುಕರ ಮನಃಸ್ಥಿತಿಗೆ ಸಾರ್ವಜನಿಕ ವಲಯದಲ್ಲಿಯೂ ಸಾಕಷ್ಟು ಆಕ್ರೋಶ-ದಿಗ½Åಮೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ಇಷ್ಟೊಂದು ಹೇಯ ರೀತಿಯಲ್ಲಿ ಕೊಲೆ ಮಾಡಿರುವ ಆ ವ್ಯಕ್ತಿಗಳು ಯಾರು ಎಂಬ ಬಗ್ಗೆ ತಿಳಿಯಲು ಜನರು ಕೂಡ ಅಷ್ಟೇ ಕುತೂಹಲದಲ್ಲಿ ಇದ್ದಾರೆ. ಆದರೆ, ಕೊಲೆ ನಡೆದು ನಾಲ್ಕು ದಿನ ಆಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಆಯಾಮಗಳಲ್ಲಿ ತನಿಖೆ ನಡೆಸಿ ಒಂದಷ್ಟು ಸಾಕ್ಷಾ éಧಾರಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಶೀಘ್ರದಲ್ಲೇ ಕೊಲೆ ಪ್ರಕರಣವನ್ನು ಭೇದಿಸಬಹುದು ಎನ್ನುವ ವಿಶ್ವಾಸದಲ್ಲಿ ಪೊಲೀಸರು ಕೂಡ ಇದ್ದಾರೆ. ಮಂಗಳಾದೇವಿ ಸಮೀಪದ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನು ತುಂಡರಿಸಿ ನಗರ ದಲ್ಲಿ ಎಸೆದಿದ್ದರು. ತಲೆಯ ಭಾಗ ಕದ್ರಿ ಪಾರ್ಕ್‌ನ ಅಂಗಡಿ ಬಳಿಯಲ್ಲಿ ಹಾಗೂ ದೇಹದ ಅರ್ಧ ಭಾಗ ನಂದಿಗುಡ್ಡೆ ಬಳಿ ಪತ್ತೆಯಾಗಿತ್ತು. ಪಾದದ ಭಾಗಗಳನ್ನು ಇನ್ನೆಲ್ಲೂ ಎಸೆಯಲಾಗಿದ್ದು ಇದೀಗ ಅವುಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಯಂತ್ರ ಬಳಸಿ ದೇಹ ಕತ್ತರಿಸಲಾಗಿತ್ತೇ?
ಶ್ರೀಮತಿ ಶೆಟ್ಟಿ ಅವರ ದೇಹದ ಅಂಗಾಂಗಳನ್ನು ಕೊಲೆಗಡುಕರು ಕತ್ತರಿಸಿರುವುದು ನೋಡಿದರೆ, ಕತ್ತರಿಸುವ ಯಂತ್ರವೊಂದನ್ನು ಬಳಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ತಲೆ, ದೇಹದ ಭಾಗ ಹಾಗೂ ಕೈಕಾಲುಗಳನ್ನು ಕತ್ತರಿಸಿರುವ ರೀತಿ ನೋಡಿದರೆ, ಮಾರಕಾಸ್ತ್ರದ ಬದಲು ಮರವನ್ನು ಕತ್ತರಿಸುವ ಮಾದರಿಯ ಅತ್ಯಂತ ಹರಿತವಾದ ಯಂತ್ರವನ್ನು ಬಳಸಿರಬಹುದು ಎನ್ನುವ ಸಂಶಯ ಮೂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀಮತಿಯ ಕೊಲೆ ಹೇಗೆ ಮಾಡಿರಬಹುದು ಹಾಗೂ ಆ ನಂತರ ದೇಹವನ್ನು ಹೇಗೆ ಕತ್ತರಿಸಿರಬಹುದು ಎಂಬಿತ್ಯಾದಿ ಆಯಾಮಗಳ ಬಗ್ಗೆಯೂ ಅತ್ಯಂತ ಆಳವಾದ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.