Advertisement

ಭಾರತ -ಮಲೇಶ್ಯ ವನಿತಾ ಹಾಕಿ ಸರಣಿ

09:50 PM Apr 01, 2019 | Team Udayavani |

ಹೊಸದಿಲ್ಲಿ: ಭಾರತದ ವನಿತಾ ಹಾಕಿ ತಂಡ ಮಲೇಶ್ಯ ವಿರುದ್ಧ 5 ಪಂದ್ಯಗಳ ಸರಣಿಗಾಗಿ ಕೌಲಾಲಂಪುರಕ್ಕೆ ಪಯಣ ಬೆಳೆಸಲಿದೆ.

Advertisement

ಇದೇ ಗುರುವಾರ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಭಾರತ ತಂಡವನ್ನು ಗೋಲ್‌ ಕೀಪರ್‌ ಸವಿತಾ ಮುನ್ನಡೆಸಲಿದ್ದಾರೆ. ಇದು ಜೂನ್‌ನಲ್ಲಿ ನಡೆಯಲಿರುವ ಎಫ್ಐಎಚ್‌ ಸಿರೀಸ್‌ ಫೈನಲ್‌ ಕೂಟಕ್ಕೆ ತರಬೇತಿಯಾಗಿರಲಿದೆ.

“ಈ ವರ್ಷದ ಆರಂಭದಲ್ಲಿ ಸ್ಪೇನ್‌ ಹಾಗೂ ಐರ್ಲೆಂಡ್‌ ವಿರುದ್ಧ ಸರಣಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಮಲೇಶ್ಯಕ್ಕೂ ಇದೇ ಆತ್ಮವಿಶ್ವಾಸದಿಂದ ಪಯಣ ಬೆಳೆಸಲಿದ್ದು, ಸ್ಪೇನ್‌ ಪ್ರವಾಸ ವೇಳೆ ನಾವು ಅರಿತುಕೊಂಡ ತಪ್ಪುಗಳನ್ನು ಸರಿಪಡಿಸಿಕೊಂಡು ಆಡಲಿಳಿಯಲಿದ್ದೇವೆ. ಸದ್ಯ ನಾವು ಆಡುತ್ತಿರುವ ಎಲ್ಲ ಸರಣಿಗಳೂ 2020ರ ಟೋಕಿಯೊ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಅಭ್ಯಾಸಗಳಾಗಿವೆ. ತಂಡ ಮತ್ತು ವೈಯಕ್ತಿಕ ಪ್ರದರ್ಶನವನ್ನು ಇನ್ನಷ್ಟು ಬಲಿಷ್ಠ ಗೊಳಿಸುವತ್ತ ಗಮನಹರಿಸಲಿದ್ದೇವೆ. ಸದ್ಯ ತಂಡವು ಸಮತೋಲನದಿಂದ ಕೂಡಿದ್ದು, ಕೆಲವು ಯುವ ಆಟಗಾರ್ತಿಯರಿಗೆ ಅವಕಾಶ ದೊರಕಿದೆ’ ಎಂದು ನಾಯಕಿ ಸವಿತಾ ಹೇಳಿದರು.

ಗಾಯಾಳುಗಳಾಗಿರುವ ರಾಣಿ, ನಮಿತಾ ಟೊಪ್ಪೊ, ಗುರ್‌ಜೀತ್‌ ಕೌರ್‌ ಮೊದಲಾದ ಪ್ರಮುಖ ಆಟಗಾರ್ತಿಯರು ಈ ಸರಣಿಯಿಂದ ಹೊರಗುಳಿಯದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next