Advertisement

ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ: ಮೇಯರ್‌

04:04 PM Feb 19, 2018 | |

ಮಹಾನಗರ: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

Advertisement

ನಗರದ ಕೆ.ಎಸ್‌. ರಾವ್‌ ರಸ್ತೆಯ ಮಿಸ್‌ಚಿಫ್‌ ಮಾಲ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ರೂಪ್‌ ರಂಗ್‌ ಬ್ಯೂಟಿಕ್‌ ಆ್ಯಂಡ್‌ ಟೈಲರಿಂಗ್‌ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೂತನವಾಗಿ ಆರಂಭಗೊಂಡ ಸಂಸ್ಥೆಯು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡಲಿ ಎಂದು ಹಾರೈಸಿದರು.

ಯಾವುದೇ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭದ ಕೆಲಸ. ಇದಾದ ಬಳಿಕ ಗ್ರಾಹಕಸ್ನೇಹಿಯಾಗಿಸುವುದು ಕಷ್ಟದ ಕೆಲಸ. ಬಟ್ಟೆ ಅಂಗಡಿಗಳಲ್ಲಿ ಹೆಚ್ಚಾಗಿ ಗ್ರಾಹಕ ಖರೀದಿಯ ಅನಂತರ ಸಮಸ್ಯೆಗಳು ಎದು ರಾಗುತ್ತವೆ. ಈ ಸಮಯದಲ್ಲಿ ಸಮಸ್ಯೆ ಪರಿಹರಿಸುವಲ್ಲಿ ಗಮನಕೊಡಬೇಕು ಎಂದು ತಿಳಿಸಿದರು. ಕಾರ್ಪೊರೇಟರ್‌ ಪೂರ್ಣಿಮಾ ಮಾತನಾಡಿ, ರೂಪ್‌ರಂಗ್‌ ಬ್ಯೂಟಿಕ್‌ ಆ್ಯಂಡ್‌ ಟೈಲರಿಂಗ್‌ ಸಂಸ್ಥೆಯು ಮಂಗಳೂರಿನ ಹೃದಯ ಭಾಗದಲ್ಲಿದೆ. ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ ಎಂದರು.

ರೂಪ್‌ರಂಗ್‌ ಬ್ಯೂಟಿಕ್‌ ಆ್ಯಂಡ್‌ ಟೈಲರಿಂಗ್‌ ಸಂಸ್ಥೆಯ ರಾಧಿಕಾ ವಿ. ಪ್ರಭು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಟೈಲರಿಂಗ್‌ ಮತ್ತು ಮಹಿಳಾ ಉಡುಪುಗಳ ಕಲೆಕ್ಷನ್‌ ಗಳು ಇವೆ. ಗ್ರಾಹಕರಿಗೆ ಅವರ ಇಚ್ಛೆಯಂತೆ ಡಿಸೈನ್‌ ಮತ್ತು ಎಂಬ್ರಾಯಡ್‌ ಕಸೂತಿ ಮಾಡಿ ಕೊಡಲಾಗುವುದು ಎಂದರು. ರೂಪಾ ಅಶೋಕ್‌, ನೃತ್ಯಗಾರ್ತಿ ಅದ್ವಿಕಾ ಶೆಟ್ಟಿ, ನಟಿ ಶಿಫಾಲಿ ನಾೖಕ್‌, ವಿ.ಜೆ. ಸ್ಟೀಲರ್ ದೇವಿಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next