ಉಡುಪಿ: ಮಹಿಳೆಯರಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಪಡಿಸುವುದರಿಂದ ಸಮಾಜದ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂಬ ಫಲಿತಾಂಶಗಳನ್ನು ಈಗಾಗಲೇ ಜಾಗತಿಕವಾಗಿ ಸ್ವೀಕರಿಸಲಾಗಿದೆ. ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದ್ದು ಮಹಿಳೆಯರನ್ನು ಅಧಿಕಾರ ಮತ್ತು ಮುಖ್ಯ ವಾಹಿನಿಗೆ ತರುವ ಮೂಲಕ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಬೇಕಾದುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ಸಮ್ಮೇಳನವನ್ನು ಆಯೋಜಸಲಾಗಿದೆ.
ಫೆಬ್ರವರಿ 12 ,ಭಾನುವಾರದಂದು ಉಡುಪಿಯ ಓಷಿಯನ್ ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಾಧನೆಗೈದ ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನವೂ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆಬ್ರವರಿ 11,ಶನಿವಾರ ಸಂಜೆ ಮಣಿಪಾಲದಲ್ಲಿ ವಾಕ್ ಫೋರ್ ಹೋಪ್ ಎಂಬ ಹೆಸರಿನಲ್ಲಿ ವಾಕಥಾನ್ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಟೈಗರ್ ಸರ್ಕಲ್ ವರೆಗೆ ವಾಕಥಾನ್ ನಡೆಯಲಿದೆ.
ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:
Click here to download the brochure of SunShine Summit
Click here to download the brochure of Walkathon