Advertisement

‘ಮಹಿಳಾ ಸ್ವಾವಲಂಬನೆ ಸಹಕಾರಿ ಸಂಸ್ಥೆಗಳ ಗುರಿಯಾಗಲಿ’

10:10 AM Mar 17, 2018 | Karthik A |

ಕಾಸರಗೋಡು: ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಕೆಲಸ ಸಹಕಾರಿ ಸಂಸ್ಥೆಗಳ ಮೂಲಕ ಆಗಬೇಕೆಂದು ಜಾಯಿಂಟ್‌ ರಿಜಿಸ್ಟ್ರಾರ್‌ ಆಫ್‌ ಕೋ-ಆಪರೇಟಿವ್‌ ಸೊಸೈಟಿಯ ರಹೀಂ ಅಭಿಪ್ರಾಯಪಟ್ಟರು. ಕಾಸರಗೋಡು ಶ್ರೀ ನಾರಾಯಣ ಗುರು ವನಿತಾ ಸರ್ವೀಸ್‌ ಕೋ- ಆಪರೇಟಿವ್‌ ಸೊಸೈಟಿಯ ಸ್ಥಿರ ಠೇವಣಿ ಹಾಗೂ ಸಾಲ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಯಾವುದೇ ಸಹಕಾರಿ ಸಂಸ್ಥೆಗಳು ಠೇವಣಿ ಸಂಗ್ರಹಿಸುವುದೇ ಗುರಿಯಾಗಿರಿಸದೆ ತಳಮಟ್ಟದಲ್ಲಿರುವ ಮಹಿಳೆಯರಿಗೆ ಸ್ವಉದ್ಯೋಗ ಆರಂಭಿಸಲು ಸಾಲ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಜವಾಬ್ದಾರಿ ಸೊಸೈಟಿಯ ಆಡಳಿತ ಮಂಡಳಿಗಿದೆ ಎಂದರು.

ಸ್ಥಿರ ಠೇವಣಿ ಪತ್ರವನ್ನು ಚಂದ್ರಕಲಾ ಹಾಗೂ ವಸಂತಿ ಅವರಿಗೆ ರಹೀಂ ಅವರು ವಿತರಿಸಿದರು. ಅಸಿಸ್ಟೆಂಟ್‌ ರಿಜಿಸ್ಟ್ರಾರ್‌ ಜಯಚಂದ್ರನ್‌ ಸಾಲ ಪತ್ರವನ್ನು ನಳಿನಿ ಅವರಿಗೆ ವಿತರಿಸಿದರು. ಯೂನಿಟ್‌ ಇನ್ಸ್‌ಪೆಕ್ಟರ್‌ ಬೈಜು, ನಾರಾಯಣ ಚೆನ್ನಿಕರೆ, ಕೆ. ಕಮಲಾಕ್ಷ ಸುವರ್ಣ, ಶಿವ ಕೆ., ಚಂದ್ರಶೇಖರ ಚಿಪ್ಲುಕೋಟೆ ಮೊದಲಾದವರು ಶುಭಹಾರೈಸಿದರು. ಸರೋಜಿನಿ ಕೆ. ಅಧ್ಯಕ್ಷತೆ ವಹಿಸಿದರು. ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next