ಮಂಗಳೂರು: ಈಗಿನ ಮಹಿಳೆಯರು ಪುರುಷರಿಗೆ ಸರಿ ಸಮನಾಗಿ ಬದುಕು ಸಾಗಿಸುತ್ತಿ ದ್ದಾರೆ. ನಾವು ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದ್ದು, ಮಹಿಳಾ ಮೀಸಲಾತಿಯನ್ನು ಅವಲಂಬಿಸ ಬಾರದು. ಗಂಡು-ಹೆಣ್ಣಿನ ತಾರತಮ್ಯ ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ. ಸಿಇಒ ಎಂ.ಆರ್. ರವಿ ಮಾತನಾಡಿ, ಹಿಂದಿನ ಕಾಲದ ತಾಯಂದಿರಲ್ಲಿ ಇದ್ದ ಧೈರ್ಯ, ಆತ್ಮವಿಶ್ವಾಸ ಈಗಿನ ವಿದ್ಯಾವಂತ ಹೆಣ್ಣು ಮಕ್ಕಳಲ್ಲಿ ಕಾಣದಾಗಿದೆ. ಇಂದು ಸಂಸ್ಕಾರವಂತರಾದ, ದೇಶ ವನ್ನು ಕಟ್ಟುವಂತಹ ಹೆಣ್ಣು ಮಕ್ಕಳ ಆವಶ್ಯಕತೆ ನಮ್ಮ ಸಮಾಜಕ್ಕೆ ಇದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬರಹ ಗಾರರಾದ ಅ.ನಾ. ಪೂರ್ಣಿಮಾ ಅವರು ಈ ವಿಶ್ವ ಮಹಿಳಾ ದಿನವನ್ನು “ಅಭಿವೃದ್ಧಿಗಾಗಿ ಒತ್ತಾಯ’ ಎಂಬ ಘೋಷಣೆ ಅಡಿಯಲ್ಲಿ ಆಚರಿಸ ಲಾಗುತ್ತಿದೆ. ಹೆಮ್ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆ ಯಬೇಕು. ಶೋಷಣೆಯನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಹೆಣ್ಣು ಮೈಗೂಡಿಸಬೇಕು ಎಂದರು.
ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೂ ಅವಳ ಮೇಲೆ ನಿರಂತರ ವಾಗಿ ದೌರ್ಜನ್ಯ ನಡೆಯ ತ್ತಲೇ ಇದೆ. ಮಹಿಳೆಯರು ಜಾಗೃತರಾಗಬೇಕು. ಮಹಿಳೆಯರು ಸರಕಾರದ ಸೌಲಭ್ಯ ಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಕಸ್ತೂರಿ (ಸಂಗೀತ ಕ್ಷೇತ್ರ), ಈಶ್ವರಿ ಸ್ತ್ರೀಶಕ್ತಿ ಗುಂಪು (ಈರೆಕೋಡಿ, ಬಂಟ್ವಾಳ), ವೇದಾವತಿ (ಏಣಿತಡ್ಕ-1 ಅಂಗನವಾಡಿ ಕೇಂದ್ರ, ಪುತ್ತೂರು), ವನಿತಾ (ಕೊಳಲ ಬಾಕಿಮಾರು, ಅಂಗನವಾಡಿ ಕೇಂದ್ರ, ಬಂಟ್ವಾಳ), ರೇಣುಕಾ (ಬಡಕಬೈಲು ಅಂಗನವಾಡಿ ಕೇಂದ್ರ, ಬಂಟ್ವಾಳ), ಸುಲೋಚನಾ (ಬೆಳ್ಳಾರೆ, ಅಂಗನವಾಡಿ ಕೇಂದ್ರ, ಸುಳ್ಯ) ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೃಷ್ಟಿದೋಷವುಳ್ಳ 10 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಉಸ್ಮಾನ್, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಮತ್ತು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯಮುನಾ ಉಪಸ್ಥಿತರಿದ್ದರು.