Advertisement

ವನಿತಾ ಕ್ರಿಕೆಟ್‌: ಭಾರತ “ಎ’ 3-0 ಕ್ಲೀನ್‌ಸ್ವೀಪ್ ಸಾಧನೆ

06:00 AM Oct 27, 2018 | |

ಮುಂಬಯಿ: ಟಿ20 ಕ್ರಿಕೆಟ್‌ನಲ್ಲಿ ಅಜೇಯ ಪರಾಕ್ರಮ ಮುಂದುವರಿಸಿದ ಭಾರತ “ಎ’ ತಂಡ ಪ್ರವಾಸಿ ಆಸ್ಟ್ರೇಲಿಯ “ಎ’ಯನ್ನು ಮೂರನೇ ಪಂದ್ಯದಲ್ಲೂ ಮಣಿಸಿ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಇದ ರೊಂದಿಗೆ ಏಕದಿನ ಸರಣಿಯಲ್ಲಿ ಅನುಭವಿಸಿದ 3-0 ಸೋಲಿಗೆ ಭಾರತ ಇಷ್ಟೇ ಅಂತರದಿಂದ ಸೇಡು ತೀರಿಸಿಕೊಂಡಿತು.

Advertisement

ಶುಕ್ರವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ 154 ರನ್‌ ಗಳಿಸಿದರೆ, ಆಸ್ಟ್ರೇಲಿಯ “ಎ’ 19.2 ಓವರ್‌ಗಳಲ್ಲಿ 117ಕ್ಕೆ ಕುಸಿದು 37 ರನ್ನುಗಳ ಸೋಲನುಭವಿಸಿತು. ಪೂನಂ ಯಾದವ್‌ (23ಕ್ಕೆ 3), ಪೂಜಾ ವಸ್ತ್ರಾಕರ್‌ (21ಕ್ಕೆ 2) ಮತ್ತು ಅನುಜಾ ಪಾಟೀಲ್‌ (26ಕ್ಕೆ 2) ಆಸೀಸ್‌ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. 

18 ರನ್‌ ಆಗುವಷ್ಟರಲ್ಲಿ ಮಿಥಾಲಿ ರಾಜ್‌ (7) ಮತ್ತು ಸ್ಮತಿ ಮಂಧನಾ (5) ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಜೆಮಿಮಾ ರೋಡ್ರಿಗಸ್‌ (38) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (41) ಆಸರೆಯಾಗಿ ನಿಂತರು.

Advertisement

Udayavani is now on Telegram. Click here to join our channel and stay updated with the latest news.

Next