ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಹಿತ ದೂರುಗಳನ್ನು, ಮತದಾರರ ಸಹಾಯ ವಾಣಿ ಇತ್ಯಾದಿಗಳನ್ನು ನಿಯಂತ್ರಿಸುವ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಈ ನಿಯಂತ್ರಣ ಕೊಠಡಿ ಕಿರಿಯ ವರಿಷ್ಠಾಧಿಕಾರಿಗಳಾದ ಇಬ್ಬರು ಮಹಿಳೆಯರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ. ರಾಜ್ಯದಲ್ಲಿ ಮಹಿಳೆಯರೇ ನೇತೃತ್ವ ನೀಡುತ್ತಿರುವ ಏಕೈಕ ನಿಯಂತ್ರಣ ಕೊಠಡಿ ಇದಾಗಿದೆ.
Advertisement
ಕಿರಿಯ ವರಿಷ್ಠಾಧಿಕಾರಿಗಳಾದ ಸಿ.ಜಿ. ಶ್ಯಾಮಲಾ, ಇಂದೂ ಎಂ. ದಾಸ್ ಅವರನ್ನು ನೋಡಲ್ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ನೇಮಕಗೊಳಿಸಿದ್ದಾರೆ. ಗುಮಾಸ್ತರಾದ ಷೀಜಾ ಎ., ನಮಿತಾ ಎ., ಸಜೀತಾ ಪಿ.ಎ. ಈ ಕೊಠಡಿಯಲ್ಲಿ ಸಕ್ರಿಯ ರಾಗಿದ್ದಾರೆ.
Related Articles
Advertisement
ಮೊಬೈಲ್ ಫೋನ್‌ನಲ್ಲಿ ಬಹಳ ಸುಲಭ ವಾಗಿ ಬಳಸಬಹುದಾದ ರೀತಿ ಆ್ಯಪ್ ರಚಿಸ ಲಾಗಿದೆ. ನೀತಿಸಂಹಿತೆ ಉಲ್ಲಂಘನೆ ನಡೆದಿ ರುವ ಪ್ರದೇಶಗಳಲ್ಲಿ ನೇರವಾಗಿ ತೆರಳಿ ಚಿತ್ರ ಪಡೆದರೆ ಮಾತ್ರ ಆ್ಯಪ್ ಮೂಲಕ ರವಾನಿಸ ಬಹುದಾಗಿದೆ. ಇತರರು ಪಡೆದ ಚಿತ್ರ ಪಡೆದು ಅಪ್ ಲೋಡ್ ಸಾಧ್ಯವಿಲ್ಲ. ಈ ಮೂಲಕ ಹುಸಿದೂರುಗಳನ್ನು ದಾಖಲಿಸಲು ಸಾಧ್ಯವಿಲ್ಲ. ನಿರಂತರ 5 ನಿಮಿಷಗಳ ಕಾಲ ಮಾತ್ರ ಈ ಆ್ಯಪ್ ಚಟುವಟಿಕೆ ನಡೆಸುತ್ತದೆ. ಮತ್ತೆ ಆ್ಯಪ್ ತೆರೆದು ದೂರು 5 ನಿಮಿಷಗಳ ಅವಧಿಯಲ್ಲಿ ಸೀಮಿತಗೊಳಿಸಿ ರವಾನಿಸಬೇಕಾಗುತ್ತದೆ. ಸಿ-ವಿಜಿಲ್ ಆ್ಯಪ್ ಪ್ಲೇಸೋrರ್‌ನಲ್ಲಿ ಲಭ್ಯವಿದೆ.
ದೂರುಗಳಿಗೆ ತತ್‌ಕ್ಷಣ ಪರಿಹಾರಚುನಾವಣೆ ಸಂಬಂಧ ದೂರುಗಳಿದ್ದಲ್ಲಿ 04994-255825, 04994- 255676 ನಂಬ್ರಗಳಿಗೆ ನೀಡಬಹುದು. ಈ ದೂರುಗಳಿಗೂ ತತ್‌ಕ್ಷಣ ಪರಿಹಾರ ಲಭಿಸಲಿದೆ. ಮತದಾರರ ಸಹಾಯವಾಣಿ 1950 ನಂಬ್ರಕ್ಕೆ ಈಗಾಗಲೇ 175 ದೂರುಗಳು ಲಭಿಸಿವೆ. ಅನಿವಾಸಿ ಭಾರತೀಯರ ಮತದಾನ, ಗುರುತು ಚೀಟಿ ಪಡೆಯುವಿಕೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ಈ ನಿಯಂತ್ರಣ ಕೊಠಡಿಯ ಸದಸ್ಯೆಯರು ತಾಳ್ಮೆಯಿಂದ ವ್ಯವಹರಿಸುತ್ತಾರೆ.