Advertisement

ಮಹಿಳೆಯರಿಗೂ ಸೇನೆಯಲ್ಲಿ ಕಾಯಂ ಹುದ್ದೆ

12:30 AM Mar 06, 2019 | |

ಹೊಸದಿಲ್ಲಿ: ಸದ್ಯದಲ್ಲೇ ಸೇನೆಯ ಎಲ್ಲ 10 ಶಾಖೆಗಳಲ್ಲೂ ಮಹಿಳಾ ಅಧಿಕಾರಿಗಳು ಕಾಯಂ ಹುದ್ದೆ ಪಡೆಯುವುದು ಸಾಧ್ಯವಾಗಲಿದೆ. ಅಲ್ಪಾವಧಿ ಅಧಿಕಾರಿಗಳಾಗಿ ನೇಮಕಗೊಂಡಿರುವ ಮಹಿಳೆಯರನ್ನು ಕಾಯಂಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದ್ಯದಲ್ಲೇ ಇದು ಜಾರಿಯಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Advertisement

ಈವರೆಗೆ ಕೇವಲ ಎರಡೇ ವಿಭಾಗಗಳಲ್ಲಿ ಅಂದರೆ ಜಡ್ಜ್ ಅಡ್ವೊಕೇಟ್‌ ಜನರಲ್‌(ಜೆಎಜಿ) ಮತ್ತು ಆರ್ಮಿ ಎಜುಕೇಷನ್‌ ಕಾರ್ಪ್‌ನಲ್ಲಿ ಮಾತ್ರವೇ ಮಹಿಳೆಯರಿಗೆ ಕಾಯಂ ಹುದ್ದೆ ಲಭ್ಯವಾಗುತ್ತಿತ್ತು. ಇನ್ನು ಮುಂದೆ ಉಳಿದ 8 ವಿಭಾಗಗಳಲ್ಲೂ ಮಹಿಳಾ ಅಧಿಕಾರಿಗಳ ಹುದ್ದೆ ಕಾಯಂ ಆಗಲಿದೆ ಎಂದೂ ಹೇಳಿದೆ. ರಣಾಂಗಣದಲ್ಲಿ ಹೋರಾಡಲು ಮಹಿಳೆಯರಿಗಿದ್ದ ನಿಷೇಧವನ್ನು 2015ರ ಅಕ್ಟೋಬರ್‌ನಲ್ಲಿ ತೆಗೆದುಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next