Advertisement

ಮಹಿಳೆಯರಿಗಿದೆ ಎಲ್ಲ ರಂಗದಲ್ಲಿ ಮುಕ್ತ ಅವಕಾಶ: ಕಾಶೀಬಾಯಿ

06:04 PM Mar 27, 2022 | Shwetha M |

ಮುದ್ದೇಬಿಹಾಳ: ಆದರ್ಶ ಕುಟುಂಬ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ. ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ಅತ್ತೆಯಾಗಿ, ನಾದಿನಿಯಾಗಿ, ಅಜ್ಜಿಯಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗ ಒಂದು ಆದರ್ಶ ಕುಟುಂಬ ನಿರ್ಮಾಣಗೊಳ್ಳುವುದು ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕಿ, ಮಹಿಳಾ ಸಾಹಿತಿ ಡಾ| ಬೋರಮ್ಮ ಪೊಲೀಸ್‌ ಪಾಟೀಲ (ರಾಂಪುರ) ಹೇಳಿದರು.

Advertisement

ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌, ಯುವ ಘಟಕ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಲಿಂ| ಶಿವಪುತ್ರಯ್ಯ ಕಲ್ಯಾಣಮಠ, ಲಿಂ| ಸಿದ್ಧಲಿಂಗಪ್ಪ ಗವಣ್ಣವರ ಹಾಗೂ ಲಿಂ| ಭುವನೇಶ ಕಟಗೇರಿ ಸ್ಮರಣಾರ್ಥ ದತ್ತಿ ಉಪನ್ಯಾಸ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅನುಭಾವದ ವಿಷಯ ಮಂಡಿಸಿದರು.

ಇದೇ ವೇಳೆ ಆದರ್ಶ ಕುಟುಂಬದಲ್ಲಿ ಮಹಿಳೆಯ ಪಾತ್ರ ವಿಷಯವಾಗಿ ನಡೆದ ದೃಶ್ಯ ರೂಪಕದಲ್ಲಿ ತಾಯಿಯಾಗಿ ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ರಾಂಪುರ, ಮಗಳಾಗಿ ಮಹಾದೇವಿ ಕಿಣಗಿ, ಸಹೋದರಿಯಾಗಿ ಸರೋಜಾ ಕೋರಿ, ಹೆಂಡತಿಯಾಗಿ ವಿಜಯಲಕ್ಷ್ಮà ಬಿದರಕುಂದಿ, ಸೊಸೆಯಾಗಿ ಶಿವಲೀಲಾ ಬಿರಾದಾರ, ಅತ್ತೆಯಾಗಿ ಅನ್ನಪೂರ್ಣ ಬಿರಾದಾರ, ನಾದಿನಿಯಾಗಿ ಶಿವಲೀಲಾ ಹಾದಿಮನಿ, ಅಜ್ಜಿಯಾಗಿ ಸುನಂದಾ ಬೇವಿನಗಿಡದ ಪಾಲ್ಗೊಂಡು ವಿಶೇಷತೆ ಮೆರೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಶೀಬಾಯಿ ರಾಂಪುರ ಅವರು, ಮಹಿಳೆಗೆ ಇಂದು ಎಲ್ಲ ರಂಗದಲ್ಲೂ ಅವಕಾಶಗಳು ಮುಕ್ತವಾಗಿವೆ. ಹೀಗಿದ್ದರೂ ಆಕೆ ಸ್ವತಂತ್ರ್ಯವಾಗಿ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಇದು ಬೇಸರದ ಸಂಗತಿ. ಪುರುಷರ ಜೊತೆಗೆ ಸಮಾನವಾಗಿ ಅವಳು ಬೆಳೆದು ಬರುವ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕು ಎಂದರು.

ಶಿಕ್ಷಕಿ ಮಹಾದೇವಿ ನಾಲತವಾಡ ಅವರು ಪ್ರಾಸ್ತಾವಿಕವಾಗಿ ಪ್ರಾಧ್ಯಾಪಕರಾಗಿದ್ದ ಭುವನೇಶ ಕಟಗೇರಿಯವರ ಕುರಿತು ಮಾತನಾಡಿ, ಸ್ಥಳೀಯ ಎಂಜಿವಿಸಿ ಕಾಲೇಜಿನಲ್ಲಿ ಶಿಕ್ಷಣ ಶಾಸ್ತ್ರ ಪರಿಚಯಿಸಿದ ಕೀರ್ತಿ ಕಟಗೇರಿ ಅವರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನದಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿದೆ ಎಂದರು.

Advertisement

ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸವ ಭಾವಪೂಜೆ ನಡೆಸಿಕೊಟ್ಟರು. ಪಿಎಸೈ ರೇಣುಕಾ ಜಕನೂರ, ನೀಲಮ್ಮ ವಿರಕ್ತಮಠ, ಲಲಿತಾ ಕಟಗೇರಿ, ಗೌರಮ್ಮ ಕಲ್ಯಾಣಮಠ, ಸುನಂದಾ ಗವಣ್ಣವರ್‌ ಮತ್ತಿತರರು ವೇದಿಕೆಯಲ್ಲಿದ್ದರು. ಇದೇ ವೇಳೆ ನಾಲತವಾಡ ಆರೋಗ್ಯ ಇಲಾಖೆಯ ದಾದಿಬಿ ಮಕಾನದಾರ ಅವರನ್ನು ಸನ್ಮಾನಿಸಲಾಯಿತು. ಕದಳಿ ವೇದಿಕೆ, ಸಾಧನಾ ಮಹಿಳಾ ಒಕ್ಕೂಟ, ಶರಣ ಸಾಹಿತ್ಯ ಪರಿಷತ್‌, ಜೆಸಿ ಸಂಸ್ಥೆಯ ಮಹಿಳಾ ಸದಸ್ಯೆಯರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ವಚನ ಸಾಹಿತ್ಯ ಪರಿಷತ್‌ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಸರೋಜಾ ಕೋರಿ ನಿರೂಪಿಸಿದರು. ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next