ಕಾಸರಗೋಡು: ಕನ್ನಡ ಭಾಷೆಯ ಉಳಿಕೆಯಲ್ಲಿ ಮಹಿಳೆಯರು ವಹಿಸಬಹುದಾದ ಪಾತ್ರ ಮಹತ್ತರ ವಾದುದು ಎಂದು ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ ಎಸ್. ಅಭಿಪ್ರಾಯಪಟ್ಟರರು.
ಅವರು ಬೀರಂತಬೈಲಿನ ಕನ್ನಡ ಮಹಿಳಾ ಸಂಘದ ಸಭಾಂಗಣದಲ್ಲಿ ಜರಗಿದ ಕನ್ನಡ ಚಿಂತನೆಯ 23 ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಯ ಹೊಣೆಗಾರಿಕೆಯ ಜೊತೆಗೆ ಸಾಮಾಜಿಕ ವಾಗಿ ತೊಡಗಿಸಿಕೊಳ್ಳುವಲ್ಲಿ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗಿ ಬರುತ್ತದೆ. ಹೀಗಿದ್ದೂ ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ಭಾಗಿ ಗಳಾಗಿ ಮತ್ತೂಂದು ತಲೆಮಾರಿಗೂ ಸಂಸ್ಕೃತಿಯನ್ನು ಹಸ್ತಾಂತರಿಸುವಲ್ಲಿ ಅವರು ಬಹಳ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.
“ಮಹಿಳೆಯರು ಮತ್ತು ಕನ್ನಡ ಹೋರಾಟ’ ಎಂಬ ವಿಷಯದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ|ಯು.ಮಹೇಶ್ವರಿ ವಿಶೇಷೋಪನ್ಯಾಸ ನೀಡಿದರು. ಕನ್ನಡ ಹೋರಾಟ ಮತ್ತು ಕಾಸರಗೋಡು ಕನ್ನಡ ಮಹಿಳಾ ಸಂಘದ ಹುಟ್ಟಿಗೆ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದ ಅವರು ಭಾಷಾವಾರು ಪ್ರಾಂತ್ಯ ರಚನೆಗೆ ಮುನ್ನವೇ ಕಾಸರಗೋಡನ್ನು ಕರ್ನಾಟಕದಲ್ಲೇ ಉಳಿಸುವಂತೆ ಇಲ್ಲಿನ ಸಾವಿರಾರು ಸಂಖ್ಯೆಯ ಮಹಿಳೆಯರು ಒಂದಾಗಿ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಘಟನೆಯಿಂದ ಆರಂಭಿಸಿ ಇಂದಿನ ಪ್ರತಿ ಹೋರಾಟದಲ್ಲಿ ಮಹಿಳೆಯರು ಭಾಗವಹಿಸುತ್ತಿರುವ ಬಗೆಯನ್ನು ವಿವರಿಸಿದರು.
ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅಪೂರ್ವ ಕಲಾವಿದರು ಕಾಸರಗೋಡು, ಕಾಸರ ಗೋಡು ಕನ್ನಡ ಮಹಿಳಾ ಸಂಘಗಳ ಜಂಟಿ ಆಶ್ರಯದಲ್ಲಿ ಈ ಸಮಾರಂಭ ನಡೆಯಿತು.ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷಿ$¾à ಶ್ಯಾನು ಭೋಗ್ ಅಧ್ಯಕ್ಷತೆ ವಹಿಸಿದರು. ಮಹಿಳಾ ಗುಡಿಕೈಗಾರಿಕೆ ಘಟಕದ ಅಧ್ಯಕ್ಷೆ ದೇವಕಿ ಕೆ.ಜಿ.ಭಟ್, ಸುಗಮ ಸಂಗೀತ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷೆ ರಾಧಾಮುರಳೀಧರ್ ಉಪಸ್ಥಿತರಿದ್ದರು. ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಭಾರತೀ ಬಾಬು ಸ್ವಾಗತಿಸಿದರು.
ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವಿ.ಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕಿ ಹರಿಣಾಕ್ಷಿ ಭೋಜರಾಜ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂ ರಿನ ಡಿ. ದೇವರಾಜ್ ಅವರಿಂದ ಗೀತಾ ಗಾಯನ ಜರಗಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಧ್ರುವರಾಜ್ ಆಚಾರ್ಯ, ತಬ್ಲಾದಲ್ಲಿ ಗಗನ್‌ರಾಜ್ ಆಚಾರ್ಯ ಸಹಕರಿಸಿದರು. ಉಳಿದಂತೆ ಹರಿಣಾಕ್ಷಿ, ಹರ್ಷದಾ, ವಿನಯಾ, ಶ್ಯಾಮಲಾ ರವಿರಾಜ್, ಧ್ರುವ ರಾಜ್, ಗಗನ್‌ರಾಜ್ ಗಾಯನ ನಡೆಸಿದರು.