ನವದೆಹಲಿ: ಕಪಿಯೊಂದು ವ್ಯಕ್ತಿಯೊಬ್ಬರ ಕನ್ನಡಕವನ್ನು ದಿಢೀರನೆ ಕಿತ್ತುಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ಬುದ್ಧಿವಂತಿಕೆಯ ನಡೆಯಿಂದಾಗಿ ಕನ್ನಡಕವನ್ನು ಮರಳಿ ಪಡೆದಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:IPL 2023 ಫೈನಲ್ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ: ಖ್ಯಾತ ರಾಪರ್ ಗಳು ಭಾಗಿ
ಇನ್ಸ್ ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ಕನ್ನಡಕಧಾರಿ ವ್ಯಕ್ತಿಯೊಬ್ಬರು ಮೆಟ್ಟಿಲು ಹತ್ತಿಕೊಂಡು ಬರುತ್ತಿದ್ದು, ಈ ವೇಳೆ ಸಮೀಪದಲ್ಲೇ ಕಾದು ಕುಳಿತುಕೊಂಡಿದ್ದ ಕೋತಿಯೊಂದು ದಿಢೀರನೆ ವ್ಯಕ್ತಿಯ ಕನ್ನಡಕವನ್ನು ಕಿತ್ತುಕೊಂಡು ಮೆಟ್ಟಿಲ ಆವರಣದ ಒಂದು ಮೂಲೆಯಲ್ಲಿ ಹೋಗಿ ಕುಳಿತುಕೊಂಡು ಬಿಟ್ಟಿತ್ತು.
ಕನ್ನಡಕ ಹಿಡಿದುಕೊಂಡ ಕೋತಿ ತಾನು ಒಂದೆರಡು ಬಾರಿ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾಗಲೇ ಮಹಿಳೆಯೊಬ್ಬರು ಆಗಮಿಸಿ, ಕೋತಿಗೆ ತಿನ್ನಲು ಹಣ್ಣುಗಳನ್ನು ಕೊಟ್ಟಿದ್ದರು. ಆಗ ಕೋತಿ ಕನ್ನಡಕವನ್ನು ಕೆಳಗಿಟ್ಟು ಹಣ್ಣನ್ನು ಹಿಡಿದುಕೊಂಡ ಸಂದರ್ಭದಲ್ಲಿ ಮಹಿಳೆಯ ಕನ್ನಡಕವನ್ನು ತೆಗೆದುಕೊಂಡು, ವ್ಯಕ್ತಿಗೆ ಹಿಂದಿರುಗಿಸಿರುವ ದೃಶ್ಯ ವಿಡಿಯೋದಲ್ಲಿದೆ.
Related Articles
ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಹಲವರು ಮಹಿಳೆಯ ಸಮಯೋಚಿತ ಬುದ್ಧಿವಂತಿಕೆಯನ್ನು ಹೊಗಳಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.