Advertisement

Delhi: ಮನೆಯ ಕಪಾಟಿನಲ್ಲಿತ್ತು ಯುವತಿಯ ಶವ… ಲಿವ್ ಇನ್ ಪಾರ್ಟ್ನರ್‌ ಮೇಲೆ ಶಂಕೆ

09:39 AM Apr 05, 2024 | Team Udayavani |

ಹೊಸದಿಲ್ಲಿ: ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿರುವ ಮನೆಯೊಂದರ ಕಪಾಟಿನಲ್ಲಿ 26 ವರ್ಷದ ಯುವತಿಯ ಶವವೊಂದು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಹಲವು ದಿನಗಳಿಂದ ತನ್ನ ಮಗಳು ರುಕ್ಷಾರ್‌ಳನ್ನು ತಂದೆ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ ಆದರೆ ತಂದೆ ಎಷ್ಟೇ ಕರೆ ಮಾಡಿದರೂ ಮಗಳಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಇದರಿಂದ ಆತಂಕಗೊಂಡ ತಂದೆ ಮುಸ್ತಾಕಿಮ್ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮಗಳು ವಾಸವಿದ್ದ ಮನೆಯನ್ನು ಪರಿಶೀಲನೆ ನಡೆಸಿದ ವೇಳೆ ಮನೆಯ ಕಪಾಟಿನಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಕೊಲೆಯ ಹಿಂದೆ ಆಕೆಯ ಲಿವ್ ಇನ್ ಪಾಲುದಾರ ವಿಪಾಲ್ ಟೈಲರ್ ಪಾತ್ರವಿದೆ ಎಂದು ಆಕೆಯ ತಂದೆ ಪೊಲೀಸರ ಬಳಿ ಸಂಶಯ ವ್ಯಕ್ತಪಡಿಸಿದ್ದು, ಕಳೆದ ಒಂದೂವರೆ ತಿಂಗಳಿನಿಂದ ತನ್ನ ಮಗಳು ಟೈಲರ್ ಜೊತೆ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ, ಘಟನೆ ನಡೆದಂದಿನಿಂದ ಯುವತಿಯ ಜೊತೆಗಿದ್ದ ಪಾಲುದಾರ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಇದನ್ನೂ ಓದಿ: Case Filed: ಮಣಿಪುರ ಸಿಎಂಗೆ ಬೆದರಿಕೆ: ಲೋಕಸಭಾ ಚುನಾವಣಾ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು

Advertisement
Advertisement

Udayavani is now on Telegram. Click here to join our channel and stay updated with the latest news.

Next