ದಕ್ಷಿಣ ಅಮೇರಿಕ: ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಶವ ಪೆಟ್ಟಿಗೆಯಲ್ಲಿ ಇರಿಸಿ ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ಮೃತ ಮಹಿಳೆಯೇ ಶವಪೆಟ್ಟಿಗೆಯ ಬಾಗಿಲು ಬಡಿದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ.
ಅಂದ ಹಾಗೆ ಘಟನೆ ನಡೆದಿರುವುದು ದಕ್ಷಿಣ ಅಮೇರಿಕದ ಈಕ್ವೆಡಾರ್ ಪ್ರದೇಶದಲ್ಲಿ.
ಏನಿದು ಪ್ರಕರಣ: 76 ವರ್ಷದ ಬೆಲ್ಲಾ ಮೊಂಟೊಯಾ ಎಂಬ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಅರೋಗ್ಯ ಬಿಗಡಾಯಿಸಿದ ಪರಿಣಾಮ ಕಳೆದ ಏಳು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದರು ಆದರೆ ಆಸ್ಪತ್ರೆಯ ಮೂಲಗಳು ಜೂನ್ 8 ರಂದು ಮಹಿಳೆ ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿದೆ. ಇದನ್ನು ನಂಬಿದ ಮಹಿಳೆಯ ಕುಟುಂಬಿಕರು ಅಂತ್ಯಕ್ರಿಯೆಗೆ ತಯಾರಿ ನಡಿಸಿದ್ದಾರೆ ಮಹಿಳೆಯನ್ನು ಶವ ಪೆಟ್ಟಿಗೆಯಲ್ಲಿ ಇರಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಶವ ಪೆಟ್ಟಿಗೆಯ ಬಾಗಿಲು ಬಡಿದ ಸದ್ದು ಕೇಳಿದೆ ಇದನ್ನು ಗಮನಿಸಿದ ಕುಟುಂಬ ಸದಸ್ಯರು ಶವ ಪೆಟ್ಟಿಗೆ ಬಾಗಿಲು ತೆರೆದಾಗ ಮೃತ ಮಹಿಳೆ ಜೀವಂತವಾಗಿ ಎದ್ದು ಕೂತಿದ್ದಾರೆ, ಇದನ್ನು ಕಂಡ ಕುಟುಂಬ ಸದಸ್ಯರಿಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಇದು ಹೇಗೆ ಸಾಧ್ಯ ಎಂಬ ಆತಂಕ ಎದುರಾಗಿದೆ, ಕೂಡಲೆ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾಗ ಮಹಿಳೆ ಜೀವಂತವಾಗಿರುವುದು ದೃಢಪಟ್ಟಿದೆ.
ಜೂನ್ 16 ರಂದು ನಿಧನ:
ಮಹಿಳೆಯ ಅರೋಗ್ಯ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಮತ್ತೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಜೂನ್ 16 ರಂದು ಮೃತಪಟ್ಟಿದ್ದಾರೆ ಇದನ್ನು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದು ಬಳಿಕ ಈ ಹಿಂದೆ ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದ ಸ್ಥಳದಲ್ಲೇ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತೀವ್ರ ನಿಗಾದಲ್ಲಿ ಏಳು ದಿನಗಳನ್ನು ಕಳೆದ ನಂತರ ಬೆಲ್ಲಾ ಮೊಂಟೊಯಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಈಕ್ವೆಡಾರ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ‘ಜವಾನ್’ನಲ್ಲಿ ಪ್ರಿಯಾಮಣಿ: ಮತ್ತೊಮ್ಮೆ ಶಾರುಖ್ ಖಾನ್ ಜತೆ ನಟಿಸಲು ಕಾತರ