ಬ್ರಹ್ಮಾವರ: ಇಂದು ಎಲ್ಲಾ ವಿಭಾಗದಲ್ಲಿ ಸ್ಪರ್ಧೆ ಇರುವುದರಿಂದ ಈ ಆಧುನಿಕ ಜಗತ್ತಿನಲ್ಲಿ ನಾವು ಜೀವನ ನಡೆಸಲು ಒಂದಲ್ಲೊಂದು ಕೌಶಲವನ್ನು ಕಲಿಯಲೇಬೇಕು ಎಂದು ಉಡುಪಿ ತೇಜಸ್ವಿ ಹೋಂ ಇಂಡಸ್ಟ್ರೀಯ ಮಾಲಕಿ ಹೇಮಾ ಆಚಾರ್ಯ ಹೇಳಿದರು.
ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಮಹಿಳೆಯರ ಟೈಲರಿಂಗ್ ತರಬೇತಿ ಸಮಾರೋಪದಲ್ಲಿ ಅತಿಥಿಗಳಾಗಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ನಮ್ಮ ಬದುಕು ಉತ್ತಮವಾಗಿ ನಡೆಸಲು ಸ್ವಾವಲಂಭಿ ಗಳಾಗುವುದು ಅಗತ್ಯ ಎಂದರು.
ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಅಧ್ಯಕ್ಷತೆ ವಹಿಸಿ, ಮಾರುಕಟ್ಟೆಯಲ್ಲಿ ಬರುವ ಹೊಸ ಹೊಸ ವಿನ್ಯಾಸವನ್ನು ಅಳವಡಿಸಿಕೊಳ್ಳಿ ಹಾಗೂ ಇತರರಿಗೂ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿ ಎಂದರು.
ಗೌರವ ಉಪನ್ಯಾಸಕಿ ಸುಮತಿ ಸುವರ್ಣ ಹಾಗೂ ಶಿಬಿರಾರ್ಥಿಗಳು ತರಬೇತಿಯ ತಮ್ಮ ಅನುಭವ ಹಂಚಿಕೊಂಡರು.
ಉಪನ್ಯಾಸಕ ಸಂತೋಷ ಶೆಟ್ಟಿ ತರಬೇತಿಯ ಹಿನ್ನೋಟ ನೀಡಿ, ಕಾರ್ಯಕ್ರಮ ನಿರೂಪಿಸಿದರು.