Advertisement

ಸೋಂಕು ತಾಗಿ ಆಸ್ಪತ್ರೆ ಸೇರಿದ್ದ ಪತಿಗೆ ಪತ್ನಿಯಿಂದ ಮದ್ಯ ಸಪ್ಲೈ!: ಆಸ್ಪತ್ರೆಯಲ್ಲಿ ರಂಪಾಟ

02:36 PM Aug 17, 2020 | keerthan |

ಚೆನ್ನೈ: ಕೋವಿಡ್-19 ಸೋಂಕು ಪೀಡಿತನಾಗಿ ಆಸ್ಪತ್ರೆಗೆ ದಾಖಲಾಗಿರುವ ಪತಿಗೆ ಕದ್ದುಮುಚ್ಚಿ ಮದ್ಯ ಸರಬರಾಜು ಮಾಡಿದ್ದ ಮಹಿಳೆಯೊಬ್ಬರು ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಇತ್ತೀಚೆಗೆ ನಡೆದಿದೆ.

Advertisement

ತಮಿಳುನಾಡಿನ ಕುದ್ದಲೂರಿನ ರಾಜಾ ಮುತ್ತಯ್ಯ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. ಕುಡಿದ ಮತ್ತಿನಲ್ಲಿ ಪತಿ ಆಸ್ಪತ್ರೆಯಲ್ಲಿ ಗಲಾಟೆ ನಡೆಸಿದ್ದರಿಂದ ಮದ್ಯದ ವಿಷಯ ಬೆಳಕಿಗೆ ಬಂದಿದೆ.

ಟಿ. ಮುತ್ತು ಕುಮಾರ್ (48) ಎಂಬಾತ ವಾರದ ಹಿಂದೆ ಕೋವಿಡ್ ಸೋಂಕು ದೃಢವಾಗಿ ಆಸ್ಪತ್ರೆ ಸೇರಿದ್ದ. ಆತನ ಪತ್ನಿ ಎಂ. ಕಲೈಮಂಗೈ ಆಸ್ಪತ್ರೆಗೆ ಊಟದ ಬ್ಯಾಹ್ ತಂದು ಕೊಟ್ಟಿದ್ದಳು. ಆದರೆ ಊಟದ ಮಾಡಿದ ನಂತರ ಈತ ಮದ್ಯದ ಅಮಲಿನಲ್ಲಿ ಆಸ್ಪತ್ರೆಯಲ್ಲಿ ರಂಪಾಟ ನಡೆಸಿದ್ದ.

ಇದನ್ನೂ ಓದಿ: ವಾಟ್ಸಾಪ್ ಮೂಲಕ ಗಲಭೆಗೆ ಜನ ಸೇರಿಸಿದ್ದ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷನ ಬಂಧನ

ಚಿದಂಬರಂ ಅಣ್ಣಾಮಲೈ  ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮುತ್ತುಕುಮಾರನ್ ಮತ್ತು ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 269(ಸೋಂಕು ಹರಡುವ ಕುರಿತು ನಿರ್ಲಕ್ಷ್ಯ), 271(ಕ್ವಾರಂಟೈನ್ ನಿಯಮ ಉಲ್ಲಂಘನೆ) ಹಾಗೂ 294ಬಿ(ಅಸಭ್ಯ ವರ್ತನೆ) ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next