Advertisement

ಪ್ಲಾಸ್ಟಿಕ್‌ ಮರು ಬಳಕೆ ಕಾರ್ಖಾನೆಯಲ್ಲಿ ಮಹಿಳೆ ಸಾವು

08:26 PM Apr 03, 2022 | Team Udayavani |

ಬೆಂಗಳೂರು:  ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರದ ಬೆಲ್ಟ್ ಗೆ ಯುವತಿಗೆ ವೇಲ್‌ ಸಿಲುಕಿದ ಪರಿಣಾಮ, ಯಂತ್ರದ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ನಾಯಂಡಹಳ್ಳಿಯಲ್ಲಿ ಜರುಗಿದೆ.

Advertisement

ಗಂಗೊಡನಹಳ್ಳಿ ನಿವಾಸಿ ಸಾಜಿಯಾ ಭಾನು (28) ಮೃತ ಯುವತಿ. ಸಾಜಿಯಾ ತಾಯಿ ನಝೀಮಾ ಕೊಟ್ಟ ದೂರಿನ ಆಧಾರದ ಮೇಲೆ ಚಂದ್ರಲೇಔಟ್‌ ಪೊಲೀಸರು ಕಾರ್ಖಾನೆ ಮಾಲೀಕ ಜಿಸಾಹಂ (31) ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ನಾಯಂಡಹಳ್ಳಿಯ ಅಜಿಜ್‌ ಸೈತ್‌ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತುಂಡರಿಸಿ ಮರು ಬಳಕೆ ಮಾಡುವ ಕಾರ್ಖಾನೆಯಲ್ಲಿ ಸಾಜಿಯಾ ಕಳೆದ 2 ತಿಂಗಳಿಂದ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ 5.15ರಲ್ಲಿ ಯಂತ್ರವನ್ನು ಆಫ್‌ ಮಾಡಲು ಮುಂದಾದ ವೇಳೆ ಇವರು ಧರಿಸಿದ್ದ ವೇಲ್‌ ಯಂತ್ರದ ಬೆಲ್ಟ್ಗೆ ಸಿಲುಕಿತ್ತು. ಪರಿಣಾಮ ಯಂತ್ರದ ರಿಮ್‌ಗೆ ಸಾಜಿಯಾ ಭಾನು ತಲೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕಾರ್ಖಾನೆ ಮಾಲೀಕ ಮುಂಜಾಗ್ರತೆ  ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನನ್ನ ಮಗಳು ಮೃತಪಟ್ಟಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಜಿಯಾ ತಾಯಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next